ಸುದ್ಧಿಕನ್ನಡ ವಾರ್ತೆ
ಪ್ರಯಾಗರಾಜ್: ಮೌನಿ ಅಮಾವಾಸ್ಯೆಯ ವಿಶೇಷ ದಿನದಂದು ಸಂಜೆ 5 ಗಂಟೆಯರೆಗೆ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಒಟ್ಟೂ 5.71 ಕೋಟಿ ಜನ ಭಕ್ತಾದಿಗಳು ಅಮೃತ ಸ್ನಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನದಂದು ಅಮೃತ ಸ್ನಾನಕ್ಕಾಗಿ ಭಕ್ತಾದಿಗಳು ಮುಗಿಬಿದ್ದು ಬುಧವಾರ ಬೆಳಗಿನ ಜಾವ ಕಾಲ್ತುಳಿತ ಉಂಟಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಸ್ವಲ್ಪ ಸಮಯದ ವರೆಗೆ ಅಮೃತ ಸ್ನಾನಕ್ಕೆ ತಡೆಯೊಡ್ಡಲಾಗಿತ್ತು. ನಂತರ ಯಾವುದೇ ಅಡ್ಡಿಯಿಲ್ಲದೆಯೇ ಅಮೃತ ಸ್ನಾನ ಮುಂದುವರೆದಿತ್ತು. ಮೌನಿ ಅಮಾವಾಸ್ಯೆಯ ದಿನ ಸಂಜೆ 5 ಗಂಟೆಯವರೆಗೆ 5.71 ಕೋಟಿ ಭಕ್ತರು ಅಮೃತ ಸ್ನಾನ ಮಾಡಿದ್ದಾರೆ.

 

ಮೌನಿ ಅಮಾವಾಸ್ಯೆಯ ಅಮೃತ ಸ್ನಾನದ ಬಳಿಕ ಪಂಚಾಯತ ನಿರಂಜನ ಅಖಾಢಾದ ದಿಗಂಬರ ನಾಗ ಬಾಬಾ ಚಿದಾನಂದ ಪುರಿ ರವರು ಮಾತನಾಡಿ- ಮೌನಿ ಅಮಾವಾಸ್ಯೆಯಂದು ನಡೆದ ಅನಿರೀಕ್ಷಿತ ಘಟನೆಯಿಂದಾಗಿ ನಮ್ಮ ಶೋಭಾ ಯಾತ್ರೆಯನ್ನು ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆದರೆ ನಾವು ಕಡಿಮೆ ಸಂಖ್ಯೆಯಲ್ಲಿ ಹಂತ ಹಂತವಾಗಿ ಪವಿತ್ರ ಸ್ನಾನ ಮಾಡಲು ಬರುತ್ತಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.