ಸುದ್ದಿ ಕನ್ನಡ ವಾರ್ತೆ

ಶಿರಸಿ: ಕಾರೊಂದರಲ್ಲಿ ನಡೆದ ಶಾರ್ಟ ಸರಕ್ಯೂಟ್ ಸಮಸ್ಯೆಯಿಂದ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಘಟನೆ ಶಿರಸಿಯ ಸಿಪಿ ಬಜಾರ್ ನಲ್ಲಿ ನಡೆದಿದೆ.

 

ಯಲ್ಲಾಪುರದ ಶ್ರೀಮಾತಾ ಡ್ರೈವಿಂಗ್ ಸ್ಕೂಲ್ ನ ಮಾರುತಿ ಆಲ್ಟೋ ಕಾರಿ‌ಗೆ ನಗರದ ಶ್ರದ್ದಾನಂದಗಲ್ಲಿಯಲ್ಲಿ ಹೊಗೆ ಕಾಣಿಸಿಕೊಂಡು ಬೆಂಕಿ ತಗುಲಿತು. ತಕ್ಷಣ ಸ್ಥಳೀಯರು, ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲಾಯಿತು. ಯಲ್ಲಾಪುರದ ಮಂಜುನಾಥ ಭಟ್ಟ ಅವರಿಗೆ ಸಂಬಂಧಿಸಿದ ಕಾರಾಗಿತ್ತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.