ಸುದ್ಧಿಕನ್ನಡ ವಾರ್ತೆ
ನವದೆಹಲಿ: ದೆಹಲಿಯಲ್ಲಿ ಕುಡಿಯುವ ನೀರು ಸರಬರಾಜನ್ನು ಅಡ್ಡಿಪಡಿಸಕು ಹರಿಯಾಣ ಯಮುನಾ ನದಿಯಲ್ಲಿ ವಿಷ ಬೆರೆಸಿದೆ (Haryana has mixed poison in the Yamuna river, disrupting drinking water supply in Delhi) ಎಂದು ಅರವಿಂದ ಕೇಜ್ರಿವಾಲ್ ನೀಡಿರುವ ಹೇಖಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಬುಧವಾರ ಸಂಜೆ 8 ಗಂಟೆಯ ಒಳಗೆ ಇದಕ್ಕೆ ಸಾಕ್ಷಿ ನೀಡುವಂತೆ ಚುನಾವಣಾ ಆಯೋಗ ಕೇಜರಿವಾಲ್ ಗೆ ಸೂಚನೆ ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ಮಾತಿನ ಚಕಮಕಿ ಜೋರಾಗಿದೆ. ವಿವಿಧ ಕಾನೂನು ಮತ್ತು ತೀರ್ಪುಗಳನ್ನು ಉಲ್ಕೇಖಿಸಿರುವ ಚುನಾವಣಾ ಆಯೋಗವು, ದೇಶದ ಏಕತೆ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಯನ್ನು ನೀಡಿದರೆ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಕೇಜರಿವಾಲ್ ಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಕೇಜರಿವಾಲ್ ಹೇಳಿದ್ದೇನು…?
ನೀರು ಬಿಡದೇ ಇರುವುದಕ್ಕಿಂತ ಪಾಪ ಮತ್ತೊಂದಿಲ್ಲ. ಬಿಜೆಪಿಯು ದ್ವೇಷದ ರಾಜಕಾರಣಕ್ಕಾಗಿ ದೆಹಲಿಯ ಜನತೆ ಬಾಯಾರಿಕೆಯಿಂದ ಇರುವಂತೆ ಮಾಡಿದೆ. ಹರಿಯಾಣದಿಂದ ಬಿಡುತ್ತಿರುವ ನೀರಿನಲ್ಲಿ ವಿಷ ಬೆರೆಸುತ್ತಿದ್ದಾರೆ ಎಂದು ಜನವರಿ 27 ರಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕೇಜರಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು ಬುಧವಾರ ಸಂಜೆ 8 ಗಂಟೆಯ ಇಳಗೆ ಇದಕ್ಕೆ ಸಾಕ್ಷ್ಯ ಒದಗಿಸಬೇಕು ಎಂದು ಖಡಕ್ ಸೂಚನೆ ನೀಡಿದೆ.(The Election Commission has taken it seriously and has instructed Khadak to provide evidence for this by 8 pm on Wednesday.)