ಸುದ್ಧಿಕನ್ನಡ ವಾರ್ತೆ
Goa: ಮೆದುಳು ಸಿಷ್ಕ್ರೀಯಗೊಂಡ ( brain dead) ಮಧ್ಯಪ್ರದೇಶದ ಜಬಲ್ಪುರದ 25 ವರ್ಷದ ಯುವಕನೊಬ್ಬ ಅಂಗದಾನದ ಮೂಲಕ 5 ಜನರ ಬದುಕಿಗೆ ಆಶಾಕಿರಣವಾಗಿದ್ದಾನೆ.
ಗೋವಾ ರಾಜ್ಯದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ 2 ಮಹಿಳಾ ರೋಗಿಗಳಿಗೆ ಇದೇ ವ್ಯಕ್ತಿಯ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ. ಈ ವ್ಯಕ್ತಿಯ ಹೃದಯವನ್ನು ಮುಂಬಯಿಗೆ, ಯಕೃತ್ತನ್ನು ಅಲಹಾಬಾದ್ ಗೆ ಮತ್ತು ಶ್ವಾಸಕೋಶವನ್ನು ದೆಹಲಿಯಲ್ಲಿರುವ ರೋಗಿಗೆ ಕಸಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. (Kidneys of the same person were transplanted to 2 female patients at Bambolim Medical Hospital in Goa)
ಮಧ್ಯಪ್ರದೇಶ ಯುವಕನ ಮೂತ್ರಪಿಂಡಗಳನ್ನು ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಯಲ್ಲಿದ್ದ ಇಬ್ಬರು ಮಹಿಳಾ ರೋಗಿಗಳಿಗೆ ಕಸಿ ಮಾಡಲಾಗಿದೆ ಎನ್ನಲಾಗಿದೆ. ಮಧ್ಯಪ್ರದೇಶದ ಯುವಕ ಈ 5 ಜನ ರೋಗಿಗಳ ಬದುಕಿಗೆ ಈ ಮೂಲಕ ಆಶಾಕಿರಣವಾಗಿದ್ದಾನೆ.