ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಇದೇ ಪ್ರಪ್ರಥಮ ಬಾರಿಗೆ 2024-25 ನೇಯ ಸಾಲಿನ ಹಾಲು ಕರೆಯುವ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ. ಸದರಿ ಸ್ಫರ್ಧೆಯಲ್ಲಿ ಭಾಗವಹಿಸುವವರು , ಆಸಕ್ತಿ ಹೊಂದಿರಯವ ರೈತ ಬಾಂಧವರು ಸ್ಥಳೀಯ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘ ಅಥವಾ ಸಮೀಪದ ಪಶು ಚಿಕಿತ್ಸಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಹಾಗೂ ಈ ಕುರಿತು ಮಾಹಿತಿ ಪಡೆಯಲು ಕೋರಲಾಗಿದೆ. ನೋಂದಣಿಯ ಅವಧಿ ದಿನಾಂಕ ಫೆಬ್ರುವರಿ 1 ರಿಂದ ಫೆಬ್ರುವರಿ 5 ರವರೆಗೆ ಇದ್ದು ಆಸಕ್ತ ರೈತರು ಅತೀ ಶೀಘ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಸ್ಫರ್ಧೆಯ ನಿಯಮಾವಳಿಗಳು:
1).ಹಾಲು ಕರೆಯುವ ಸ್ಫರ್ಧೆಯಲ್ಲಿ ಒಟ್ಟೂ 5 ವಿಭಾಗ ಅಂದರೆ ಮಲೆನಾಡ ಗಿಡ್ಡ ತಳಿ,ಜರ್ಸಿ ತಳಿ, ಎಚ್ ಎಫ್ ತಳಿ, ವರ್ಗೀಕರಿಸಲಾದ ರಾಸು (ಮಿಶ್ರತಳಿ) ಹಾಗೂ ಎಮ್ಮೆಗಳಲ್ಲಿ ನಡೆಸಲಾಗುವುದು.
2).ಭಾಗವಹಿಸುವ ಆಸಕ್ತರು ಒಂದು ವಿಭಾಗದಲ್ಲಿ ಒಂದು ಜಾನುವಾರುವಿನೊಂದಿಗೆ ಮಾತ್ರ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
3).ಪ್ರತಿ ವಿಭಾಗದಲ್ಲಿ ಮೂರು ಬಹುಮಾನ ನೀಡಲಾಗುತ್ತಿದ್ದು , ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
4). ನಿರ್ಣಾಯಕರ ನಿರ್ಣಯವೇ ಅಂತಿಮವಾಗಿಸುತ್ತದೆ.
ಆಸಕ್ತರು
ಮುಖ್ಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಯಲ್ಲಾಪುರ ದೂ;-08419-200403
ಅಥವಾ ಪಶು ವೈದ್ಯಾಧಿಕಾರಿಗಳು ದೂ;-8971161277 ರವರನ್ನು ಸಂಪರ್ಕಿಸಲು ಕೋರಲಾಗಿದೆ.