ಸುದ್ಧಿಕನ್ನಡ ವಾರ್ತೆ
Goa: ಕರ್ನಾಟಕದಿಂದ ಜೀವಂತ ಹಂದಿಗಳನ್ನು ತುಂಬಿಕೊಂಡು ಬರುತ್ತಿದ್ದ ಎರಡು ಲಾರಿಗಳನ್ನು ಗೋವಾ ಪೋಲಿಸರು ವಷಪಡಿಸಿಕೊಂಡಿದ್ದಾರೆ. ಈ ಎರಡು ಟ್ರಕ್ ನಲ್ಲಿ 53 ಜೀವಂತ ಹಂದಿಗಳನ್ನು ಕರ್ನಾಟಕದಿಂದ ಗೋವಾಕ್ಕೆ ತರಲಾಗುತ್ತಿತ್ತು. (Transport of live pigs from Karnataka to Goa)
ಗೋವಾದ ವಾಳಪೈ ಪೋಲಿಸರು ಈ ಲಾರಿಗಳನ್ನು ವಷಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜೀವನ್ ಬಲ್ಲಪ್ಪ ಶಿಪ್ರಿ ಹಾಗೂ ಧಾರವಾಡದ ಸಾಗರ ಮಾರುತಿ ಜಾಧವ್ ಎಂಬ ಇಬ್ಬರನ್ನು ಅಕ್ರಮ ಹಂದಿ ಸಾಗಾಟ ಆರೋಪದಡಿ ಪೋಲಿಸರು ಬಂಧಿಸಿ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.