ಸುದ್ಧಿಕನ್ನಡ ವಾರ್ತೆ
Goa: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಗೋವಾದಿಂದ ಭಕ್ತರಿಗೆ ತೆರಳಲು ಅವಕಾಶ ನೀಡಲು ಗೋವಾ ರಾಜ್ಯ ಸರ್ಕಾರ ವಿಶೇಷ ರೈಲಿಗೆ ಚಾಲನೆ ನೀಡಲಿದೆ. ಇದರಿಂದಾಗಿ ಗೋವಾದಿಂದ ನೇರವಾಗಿ ಪ್ರಯಾಗ್ ರಾಜ್ ಗೆ ತೆರಳಲು ಅವಕಾಶ ಲಭಿಸಲಿದೆ.

ಗೋವಾದಿಂದ ಪ್ರಯಾಗರಾಜ್ ಗೆ ವಿಶೇಷ ರೈಲಿಗೆ ಚಾಲನೆ ನೀಡಲಾಗುವುದು. ಮುಂದಿನ ನಾಲ್ಕು ದಿನಗಳಲ್ಲಿ ಈ ವಿಶೇಷ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ತ್ತು ಬುಕಿಂಗ್ ಆರಂಭಿಸಲಾಗುವುದು. ಪ್ರಯಾಗರಾಜ್ ನಲ್ಲಿ ವಿಶೇಷ ಸಂಯೋಜಕರನ್ನು ನೇಮಕ ಮಾಡಲಾಗುವುದು. ಗೋವಾದಿಂದ ಕುಂಭಮೇಳಕ್ಕೆ ತೆರಳಲು ಸಬ್ಸಿಡಿ ದರದಲ್ಲಿ ಟಿಕೇಟ್ ನೀಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ಮಹಾಕುಂಭ ಮೇಳ ಆರಂಭಗೊಂಡಿದ್ದು ಫೆಬ್ರುವರಿ 26 ರ ವರೆಗೆ ನಡೆಯಲಿದೆ.ಮಹಾ ಕುಂಭ ಮೇಳದಲ್ಲಿ ಗಂಗಾ,ಯಮುನಾ,ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಲಭಿಸುತ್ತದೆ ಎಂಬ ನಂಭಿಕೆಯಿದೆ. ಇದರಿಂದಾಗಿ ಮಹಾಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಈ ಸಂಗಮ ತೀರಕ್ಕೆ ಆಗಮಿಸಿ ಸ್ನಾನ ಮಾಡುತ್ತಾರೆ.