ಪಣಜಿ(ಮಡಗಾಂವ): ಇಲ್ಲಿನ ಹಳೆ ರೈಲು ನಿಲ್ದಾಣ ಪ್ರದೇಶದಲ್ಲಿ ಸೋಮವಾರ ರಾಜು ಅಶೋಕ್ ಕಾಂಬಳೆ ಅಲಿಯಾಸ್ ಆಸಿಫ್ ಮೊಹಮ್ಮದ್ ನದಾಫ್ (35, ಮಹಾರಾಷ್ಟ್ರದ ಸಾಂಗ್ಲಿ ಮೂಲದವರು) ಕೊಲೆಯಾಗಿದ್ದಾರೆ. ಈ ಪ್ರಕರಣದಲ್ಲಿ ಶಂಕಿತ ಮುಂಬೈ ಮೂಲದ ಸುರೇಶ್ ಸಿಂಗ್ ಸೋನಾರ್ ( ನೇಪಾಳ ಮೂಲ) ಎಂಬಾತನನ್ನು ಮಾಗಾರ್ಂವ್ ಪೊಲೀಸರು ಬಂಧಿಸಿದ್ದಾರೆ. ಮದ್ಯದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಏತನ್ಮಧ್ಯೆ, ಮಾಗಾರ್ಂವ್ ಹತ್ಯೆ ಪ್ರಕರಣದ ಶಂಕಿತನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಮಡಗಾಂವ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಸೋಮವಾರ ಬೆಳಿಗ್ಗೆ ಹಳೆ ರೈಲು ನಿಲ್ದಾಣದ ಪ್ರದೇಶದಲ್ಲಿ ಇಬ್ಬರು ಕಾರ್ಮಿಕರ ನಡುವೆ ಮಾರಾಮಾರಿ ನಡೆದಿದೆ. ರಾಜು ಕಾಂಬಳೆ ಅಲಿಯಾಸ್ ಆಸಿಫ್ ನಫದ್ ಸಾಂಗ್ಲಿ ಮೂಲದವರಾಗಿದ್ದು, ರೆಂಡರರ್ ಆಗಿ ಕೆಲಸ ಮಾಡುತ್ತಿದ್ದರೆ,Áರೋಪಿ ಸುರೇಶ್ ಸಿಂಗ್ ಸೋನಾರ್ ನೇಪಾಳ ಮೂಲದವರಾಗಿದ್ದು ಪ್ರಸ್ತುತ ಫೋಂಡಾ ಪ್ರದೇಶದಲ್ಲಿ ನೆಲೆಸಿದ್ದಾನೆ.

ಮಡಗಾಂವ ಹಳೆ ರೈಲು ನಿಲ್ದಾಣ ಪ್ರದೇಶದಲ್ಲಿ ಮದ್ಯ ಸೇವಿಸಿ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸಣ್ಣಪುಟ್ಟ ಕಾರಣಕ್ಕೆ ಈ ಜಗಳ ಹೊಡೆದಾಟದಲ್ಲಿ ಅಂತ್ಯವಾಗಿದೆ. ಆ ವೇಳೆ ಸುರೇಶ್ ಸಿಂಗ್ ಸೋನಾರ್ ಕೋಪದಿಂದ ರಾಜು ಕಾಂಬಳೆ ಅಲಿಯಾಸ್ ಆಸಿಫ್ ನದಾಫ್ ಎಂಬಾತನಿಗೆ ಬಾಟಲಿಯಿಂದ ಹೊಡೆದಿದ್ದಾನೆ. ಆಗ ಕೈಯಲ್ಲಿದ್ದ ಒಡೆದ ಬಾಟಲಿಯಿಂದ ರಾಜು ಎದೆಗೆ ಇರಿದಿದ್ದಾನೆ. ಇದರಿಂದ ರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಶಂಕಿತ ಸೋನಾರ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಡಗಾಂವ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ರಾಜುವನ್ನು ತಮ್ಮ ವಾಹನದಲ್ಲಿ ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ಕರೆದೊಯ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಗೂ ಇತರೆ ಮಾಹಿತಿಯಿಂದ ಮಡಗಾಂವ ಪೊಲೀಸರು ಶಂಕಿತ ಸೋನಾರ್ ಮುಂಬೈಗೆ ಹೋಗಿರುವುದು ಪತ್ತೆಯಾಗಿದೆ.

ಮಡಗಾಂವ ಪೊಲೀಸರು ಮುಂಬೈಗೆ ತಂಡವನ್ನು ಕಳುಹಿಸಿದ್ದಾರೆ.
ಮುಂಬೈ ಪೊಲೀಸರ ಸಹಾಯದಿಂದ ಶಂಕಿತ ಸೋನಾರ್‍ನನ್ನು ಅಲ್ಲಿ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಮಡಗಾಂವ ಪೊಲೀಸ್ ಇನ್ಸ್‍ಪೆಕ್ಟರ್ ತುಳಸಿದಾಸ್ ನಾಯ್ಕ್ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.