ಸುದ್ದಿ ಕನ್ನಡ ವಾರ್ತೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಬಳಿಯ ಹೆಮ್ಮಡಗಾ ವನ್ಯಧಾಮದಲ್ಲಿ *ಸಾಹಿತ್ಯ ಸಂಭ್ರಮ* ಹಾಗೂ *ಪರಿಸರ ಉತ್ಸವ*  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಡಿನ ಹೆಮ್ಮೆಯ ಕನ್ನಡದ ಶಕ್ತಿ ಕೇಂದ್ರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಕರ ಹಲಗತ್ತಿ ಅವರು ಸಂಘವು ಮುದ್ರಿಸಿದ 2025ರ ಕನ್ನಡ ಅಂಕಿಗಳುಳ್ಳ ದಿನದರ್ಶಿಕೆಯನ್ನು ಆಜೀವ ಸದಸ್ಯರಿಗೆ ಅರ್ಪಿಸಿದ ಸಂದರ್ಭ.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.