ಸುದ್ಧಿಕನ್ನಡ ವಾರ್ತೆ
Goa: ಮುಂಬರುವ ದಿನಗಳಲ್ಲಿ ಗೋವಾದಲ್ಲಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಕುರಿತಂತೆ ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಕೆಲಸ ಆರಮಭಗೊಳ್ಳಲಿದೆ. ಬೋರಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 1200 ಕೋಟಿ ರೂ ಮಂಜೂರಾಗಿದೆ. ಗೋವಾ ರಾಜ್ಯವನ್ಮು ಮಾಲಿನ್ಯ ಮುಕ್ತ ಮತ್ತು ಅಪಘಾತ ಮುಕ್ತವಾಗಿರುವುದು ಅಗತ್ಯ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ನುಡಿದರು.

ಗೋವಾ ವಾಸ್ಕೊ ಬೈನಾದಿಂದ ಮುರ್ಗಾಂವ್ ಬಂದರಿನ ಗೇಟ್ ಸಂಖ್ಯೆ 9 ಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 644 ಕೋಟಿ ರೂ ವೆಚ್ಛದಲ್ಲಿ ನಿರ್ಮಾಣಗೊಂಡಿರುವ ಕೇಬಲ್ ಆಧಾರಿತ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉಧ್ಘಾಟಿಸಿದರು.

ಕನ್ಯಾಕುಮಾರಿ-ಮುಂಬೈ ಎಕ್ಸಪ್ರೆಸ್ ವೇ ನಿರ್ಮಿಸುವಾಗ ಗೋವಾದ ಗ್ರಾಮೀಣ ಪ್ರದೇಶಗಳಲ್ಲಿ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗಳಿದೆ. ಈ ಯೋಜನೆ ಕೈಗೊಳ್ಳುವಾಗ ಅಲ್ಲಿನ ಮನೆಗಳು ಮತ್ತು ಕಾಡಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ಇದರಿಂದಾಗಿ ಮಾಲಿನ್ಯ ಕಡಿಮೆಯಾಗುವುದು ಮಾತ್ರವಲ್ಲದೆಯೇ ಸುಗಮ ಸಂಚಾರಕ್ಕೆ ಕೂಡ ಅನುಕೂಲವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಪೀಡಿತ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸುಧಾರಣೆಗಳನ್ನು ಕೈಗೊಳ್ಳುವಂತೆ ಸಚಿವ ಗಡ್ಕರಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಸಚಿವ ಮಾವಿನ್ ಗುದಿನ್ಹೊ, ಸಭಾಪತಿ ರಮೇಶ ತವಡಕರ್, ಸಚಿವ ಸುದೀನ ಧವಳೀಕರ್, ಮತ್ತಿತರರು ಉಪಸ್ಥಿತರಿದ್ದರು.