ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಸದ್ಯ ಪ್ರವಾಸಿ ಹಂಗಾಮು ನಡೆಯುತ್ತಿದೆ. ಇದರಿಂದಾಗಿ ದೇಶ ವಿದೇಶಿಯ ಪ್ರವಾಸಿಗರು ಹೆಚ್ಚಾಗಿ ಗೋವಾಕ್ಕೆ ಆಗಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇದೀಗ ಪ್ರವಾಸಿಗರಿಗೆ ಸಂತಸದ ಸುದ್ಧಿಯೊಂದು ಹೊರಬಿದ್ದಿದೆ. ಗೋವಾದ ನೇತ್ರಾವಳಿಯ ಮೈನಾಪಿ ಹಾಗೂ ಸಾವರಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಜಲಪಾತದ ಬಳಿ ತೆರಳಲು ವಿಶೇಷ ಸಫಾರಿ ಕಾರ್ ಸೇವೆಯನ್ನೂ ಆರಂಭಿಸಲಾಗಿದೆ.

ಈ ಜಲಪಾತಕ್ಕೆ ತೆರಳಲು ಸದ್ಯ ಎರಡು ಕಾರ ಲಭ್ಯವಿದ್ದು ಮುಂಬರುವ ದಿನಗಳಲ್ಲಿ 8 ಕಾರ ವ್ಯವಸ್ಥೆ ಕಲ್ಪಿಸಲಾಗುವುದಾಗಿ ವನ ವಿಕಾಸ ಮಂಡಳದ ಅಧ್ಯಕ್ಷೆ ಡಾ. ದಿವ್ಯಾ ರಾಣೆ ಮಾಹಿತಿ ನೀಡಿದ್ದಾರೆ.

ಗೋವಾ ರಾಜ್ಯದಲ್ಲಿ ಹೆಚ್ಚುತ್ತಿರುವ ದುರ್ಘಟನೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಯು ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತಕ್ಕೆ ತೆರಳಲು ನಿಷೇಧ ಹೇರಲಾಗಿತ್ತು. ಗೋವಾ ರಾಜ್ಯದಲ್ಲಿರುವ 28 ಜಲಪಾತಗಳ ಪೈಕಿ ಹಲವು ಜಲಪಾತಗಳಲನ್ನು ಈಗಾಗಲೇ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.