ಸುದ್ಧಿಕನ್ನಡ ವಾರ್ತೆ
Goa: ಕಾರ್ಯಕರ್ತರೇ ಬಿಜೆಪಿಯ ನಿಜವಾದ ಶಕ್ತಿ. ದೇಶ ಮೊದಲು ಎಂಬ ಭಾವನೆಯೊಂದಿಗೆ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶವಬ್ನು ಕೀರ್ತಿಯ ಶಿಖರಕ್ಕೆ ಒಯ್ದು ಜಾಗತಿಕ ಮಟ್ಟದಲ್ಲಿ ದೇಶದ ಹೆಸರನ್ನು ಉಜ್ವಲಗೊಳಿಸಿದ್ದಾರೆ. ಪ್ರತಿ ಮನೆಗೂ ಸುಭೀಕ್ಷೆ ತರಲಿ ಘೋಷವಾಕ್ಯ ಯಶಸ್ವಿಯಾಗಿದೆ. ಬಲಿಷ್ಠ ಸಂಘಟನೆಯ ಮೂಲಕ ಬಿಜೆಪಿ ಎಲ್ಲಾ ಚುನಾವಣೆಯಲ್ಲಿಯೂ ದೊಡ್ಡ ಮುನ್ನಡೆ ಸಾಧಿಸುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಬಿಜೆಪಿ ಮಂಡಳ ಸಮೀತಿಯ ಅಧ್ಯಕ್ಷರಾಗಿ ಯುವ ಮುಖಂಡ ರಾಮ ನಾಯ್ಕ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರನ್ನು ಅಭಿನಂದಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಡಾ.ಕೌಸ್ತುಭ ಪಾಟ್ನೇಕರ್, ಸುಲಕ್ಷಣಾ ಸಾವಂತ್, ಬಿಜೆಪಿ ಪ್ರಮುಖ ಕಾರ್ಯಕರ್ತರು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ನಿಜವಾದ ಅರ್ಥದಲ್ಲಿ ಮಾನವ ಜೀವನವನ್ನು ಶ್ರೀಮಂತಗೊಳಿಸುವ ಕೆಲಸ ಮಾಡುತ್ತಿದೆ. ಸ್ವಾವಲಂಭಿ ಮತ್ತು ಸ್ವಾವಲಂಭಿ ಗೋವಾದ ಕನಸು ನನಸಾಗಿಸಲು ಯುವಕರು ಮುನ್ನಡೆಯುತ್ತಿದ್ದಾರೆ. ಹಾಗಾಗಿ ದೇಶದ ಭವಿಷ್ಯ ಉಜ್ವಲವಾಗಿದೆ. ಕಾಂಗ್ರೇಸ್ ಆಡಳಿತದ ಅವಧಿಯಲ್ಲಿ ದೇಶ ಮತ್ತು ರಾಜ್ಯದಲ್ಲೀಯೂ ಡಬಲ್ ಎಂಜಿನ್ ಕಾಂಗ್ರೇಸ್ ಸರ್ಕಾರ ಇತ್ತು. ಆದರೆ ಅವರು ಎಂದೂ ಕೂಡ ಅಧಿಕಾರದ ಮೌಲ್ಯವನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ವಾಗ್ದಾಳಿ ನಡೆಸಿದರು.