ಸುದ್ಧಿಕನ್ನಡ ವಾರ್ತೆ
Goa: ಕೋವಿನ್ -19 ಎಂಬ ಮಹಾಮಾರಿ ಭಾರತದಲ್ಲಿಯೂ ಹಲವರ ಪ್ರಾಣ ಕಿತ್ತುಕೊಂಡ ಕಹಿ ಘಟನೆಯನ್ನು ನಾವು ಮರೆಯುವಂತಿಲ್ಲ. ಇದೀಗ ಚೀನಾದಲ್ಲಿ ಇಂತಹದ್ದೇ ಮತ್ತೊಂದು ಮಹಾಮಾರಿ ಹರಡುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಎಚ್ ಎಂ ಪಿವಿ (HMPV) ಎಂಬ ಹೊಸ ವೈರಸ್ ಎಲ್ಲೆಡೆ ಆತಂಕ ಮೂಡಿಸಿದೆ.
ಎಚ್ ಎಂಪಿಸಿ ಎಂಬ ಸೋಂಕು ಭಾರತದಲ್ಲಿ ಇಬ್ಬರಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಮಂತ್ರಾಲಯ ಮಾಹಿತಿ ನೀಡಿದೆ.
ಆದರೆ ಗೋವಾ ರಾಜ್ಯ ಸರ್ಕಾರ ಇದುವರೆಗೂ ಎಚ್ ಎಂಪಿವಿ (HMPV) ಸೋಂಕಿಗೆ ಸಂಬಂಧಿಸಿದಂತೆ ಯಾವುದೇ ಮಾರ್ಗದರ್ಶಕ ತತ್ವವನ್ನು ಜಾರಿಗೊಳಿಸಿಲ್ಲ. ಎಚ್ ಎಂಪಿವಿ ಸೋಂಕಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವ ನಿರ್ದೇಶನ ಬರಲಿದೆಯೋ ಅದನ್ನು ನಾವು ಪಾಲಿಸುತ್ತೇವೆ ಎಂದು ಗೋವಾ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ಎಚ್ ಎಂಪಿವಿ ಇದು ಆರ್ ಎನ್ ಎ ವೈರಸ್ ಆಗಿದೆ. ಈ ವೈರಸ್ ದೇಹದಲ್ಲಿ ಸೇರಿದರೆ ನೆಗಡಿಯಂತಹ ಲಕ್ಷಣಗಳು ಕಂಡುಬರುತ್ತದೆ. ತಂಪು ಹವಾಮಾನದಲ್ಲಿ ಹೆಚ್ಚು ತೊಂದರೆಯಾಗುತ್ತದೆ. ನೆಗಡಿ, ಕೆಮ್ಮು. ಜ್ವರ ಇವು ಪ್ರಮುಖ ಲಕ್ಷಣಗಳಾಗಿದೆ.