ಸುದ್ಧಿಕನ್ನಡ ವಾರ್ತೆ
Goa: ಫ್ರಾನ್ಸನ ಅಣುಶಕ್ತಿಯ ಮೇಲೆ ಹಾರುವ ಯುದ್ಧನೌಕೆ ಚಾರ್ಲಸ್ ಡಿ ಗಾಲ್ ಸದ್ಯ ಭಾರತಕ್ಕೆ ಬಂದು ದಾಖಲಾಗಿದೆ. ಫ್ರಾನ್ಸನ ನೌಕಾದಳದ ಕ್ಯಾರಿಯರ್ ಸ್ಟ್ರೈಕ್ ಗ್ರುಪ್ ನೊಂದಿಗೆ ಈ ಯುದ್ಧ ನೌಕೆಯು ಹಿಂದೂ ಮಹಾಸಾಗರಕ್ಕೆ ಬಂದು ದಾಖಲಾಗಿದೆ.
ಈ ಯುದ್ಧನೌಕೆಯು ಗೋವಾದ ಕಿನಾರಿಯಲ್ಲಿ ಭಾರತೀಯ ನೌಕಾದಳದೊಂದಿಗೆ ನೌಕಾಸೇನೆಯ ಜಂಟಿ ತರಬೇತಯಲ್ಲಿ ಸಹಭಾಗಿಯಾಗಲಿದೆ. ಈ ಕವಾಯತಿನ ಮುಖ್ಯ ಉದ್ದೇಶ ಸಮುದ್ರ ಸುರಕ್ಷತೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದು ಆಗಿದೆ.
ಹಿಂದೂ ಮಹಾಸಾಗರದಲ್ಲಿ ಚಲನವಲನಗಳ ಕುರಿತಂತೆ ಗಮನಹರಿಸಲು ಫ್ರಾನ್ಸ ನಿಂದ ಕ್ಯಾರಿಯರ್ ಸ್ಟ್ರೈಕ್ ಗ್ರುಪ್ ಈ ಭಾಗದಲ್ಲಿ ಕಳುಹಿಸಿದೆ ಎನ್ನಲಾಗಿದೆ.