ಸುದ್ದಿ ಕನ್ನಡ ವಾರ್ತೆ

ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸ್ವಗ್ರಾಮ ಕಾಗೇರಿಯಲ್ಲಿನ ತೋಟದಲ್ಲಿ ಬುಧವಾರ ಕೊನೆ ಕೊಯ್ಲು ನಡೆದಿದ್ದು, ಸ್ವತಃ ಸಂಸದರೂ ಕೊನೆ ಹೊಡಿದು ಕೃಷಿ ಮರೆತಿಲ್ಲ ಎಂದು ಋಜುಗೊಳಿಸಿದರು.

ಬಿಡುವಿಲ್ಲದ ಕೆಲಸದ ನಡುವೆಯೂ ಸಂಸದ ಕಾಗೇರಿ ಅವರು ಮನೆ ಕೆಲಸದವರೊಂದಿಗೆ ಕಾಲ ಕಳೆದರು. ಬಿಳಿ ಲುಂಗಿ-ಟೀ ಶರ್ಟ ಧರಿಸಿ ತೋಟಕ್ಕೆ ಇಳಿದ ತೋಟ ಸುತ್ತಾಡಿ ಕೊನೆಯ ಹಗ್ಗ ಹಿಡಿದು ಅಡಿಕೆ ಕೊನೆಯನ್ನೂ ಇಳಿಸಿಕೊಂಡರು.

ಮರ ಏರಿದ್ದ ಕೊನೆ ಗೌಡನಿಗೆ ` ದೊಡ್ಡ ಕೊನೆಯ‌ನ್ನೂ ಇಡಿಯಾಗಿ ನಿಧಾನವಾಗಿ ಬಿಡು’ ಎಂದು ಸೂಚಿಸಿ ಹಗ್ಗದ ಮೂಲಕ ಕೊನೆಯನ್ನು ಇಳಿಸಿಕೊಂಡರು.
ಸ್ಪೀಕರ್ ಆಗಿದ್ದಾಗಲೂ ಕೊನೆ ಹಿಡಿದು ಸುದ್ದಿಯಾಗಿದ್ದರು.