ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮೊಳೆಮನೆಯ ಮಹೇಶ್ ಭಟ್ ರವರು ಪ್ರಸಕ್ತ  ಸಿ.ಎ (Chartered accountants) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಹೇಶ್ ಭಟ್ ರವರು ಯಲ್ಲಾಪುರ ತಾಲೂಕಿನ ಬಾಳಗೀಮನೆ ಗ್ರಾಮದ ಮೊಳೆಮನೆಯ ನಾರಾಯಣ ಭಟ್ ಮತ್ತು ಮಂಗಲಾ ಭಟ್ ದಂಪತಿಗಳ ಮಗನಾಗಿದ್ದಾರೆ.

ಮಹೇಶ್ ಭಟ್ ರವರ ಸಾಧನೆಗೆ  “ಸುದ್ಧಿಕನ್ನಡ”  ಬಳಗ ಅಭಿನಂದಿಸಿದೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗೈಯ್ಯಲಿ ಎಂದು ಹಾರೈಸುತ್ತೇವೆ.
   ಪ್ರಧಾನ ಸಂಪಾದಕರು
      ಸುದ್ಧಿಕನ್ನಡ ವಾರ್ತೆ