ಸುದ್ಧಿಕನ್ನಡ ವಾರ್ತೆ
Goa: ಪೊಂಡಾ ತಾಲೂಕಿನ ಶ್ರೀ ಅನಂತ ದೇವಸ್ಥಾನದಲ್ಲಿದ್ದ ಥಳಿ (ತೀರ್ಥೋಧ್ಭವ) ಯಲ್ಲಿ ಮುಳುಗಿ ಸ್ಥಳೀಯ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ತುಳಸೀದಾಸ್ ದತ್ತಾ ಪಾಲಕರ್ (42) ಎಂಬ ವ್ಯಕ್ತಿಯೇ ಮೃತ ದುರ್ದೈವಿಯಾಗಿದ್ದಾನೆ.
ಈ ವ್ಯಕ್ತಿ ಥಳಿಯಲ್ಲಿ ಇಳಿದ ಸಂದರ್ಭದಲ್ಲಿ ಹೃದಯಾಘಾತ ಅಥವಾ ಫಿಟ್ಸ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ತುಳಸೀದಾಸ ಈತ ಸಣ್ಣ ಮಗನಿಗೆ ಈಜು ಕಲಿಸಲು ನೀರಿಗೆ ಇಳಿದಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಘಟನೆಯ ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮೃತ ವ್ಯಕ್ತಿಯನ್ನು ನೀರಿನಿಂದ ಹೊರತೆಗೆದಿದ್ದಾರೆ. ಈ ವ್ಯಕ್ತಿಯ ಸಾವಿಗೆ ನಿಖರ ಕಾರಣ ಅಸ್ಪಷ್ಟವಾಗಿದ್ದರೂ ಕೂಡ ಮರಣೋತ್ತರ ಪರೀಕ್ಷೆಯಿಂದ ಕಾರಣ ತಿಳಿದುವರಲಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.