ಸುದ್ಧಿಕನ್ನಡ ವಾರ್ತೆ
Goa: ಪ್ರಸಕ್ತ ಪ್ರವಾಸಿ ಋತುವಿನಲ್ಲಿ ಗೋವಾದಲ್ಲಿ ಜನರು ಮತ್ತು ಪ್ರವಾಸಿಗರು ಟ್ರಾಫಿಕ್ ಜಾಮ್ಗೆ ಒಳಗಾಗಬಾರದು. ಇದಕ್ಕಾಗಿ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ವೆಸ್ಟರ್ನ ಬೈಪಾಸ್ ಉದ್ಘಾಟನೆ ಮಾಡಲಾಗಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ಗೋವಾ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹೇಳಿದ್ದಾರೆ.
ಗೋವಾದ ಮಡಗಾಂವನಿಂದ ಕುಂಕಳ್ಳಿ ಭಾಗಕ್ಕೆ ತೆರಳುವ ವೆಸ್ಟರ್ನ ಬೈಪಾಸ್ ನ್ನು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನೆರವೇರಿಸಿದರು. ಮಡಗಾಂವ್ ಪಶ್ಚಿಮ ಬೈಪಾಸ್ ಸುಮಾರು 12 ಕಿ.ಮೀ ಉದ್ದದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದಕ್ಕಾಗಿ ಕೇಂದ್ರದಿಂದ 247 ಕೋಟಿ ಮತ್ತು ರಾಜ್ಯ ಸರ್ಕಾರದಿಂದ 235 ಕೋಟಿ ಒಟ್ಟು ಮೊತ್ತ 482 ಕೋಟಿ ವೆಚ್ಛದಲ್ಲಿ ನಿರ್ಮಿಸಲಾಗಿದೆ ಎಂದು ಸಾವಂತ್ ಹೇಳಿದರು. ಅದರಂತೆ 2.75 ಕಿ.ಮೀ ಉದ್ದದ ಈ ರಸ್ತೆ ಸಂಚಾರಕ್ಕೆ ಮುಕ್ತವಾಯಿತು ಎಂದರು.
ರಾಜ್ಯದಲ್ಲಿ ಉತ್ತಮ ಆಡಳಿತ ಸಪ್ತಾಹವನ್ನು ಆಚರಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಉತ್ತಮ ಆಡಳಿತ ಸಪ್ತಾಹ ನಡೆಸಿ ಜನಪರ ಕೆಲಸ ಮಾಡಲಾಗುವುದು. ಮೂಲಸೌಕರ್ಯ ಮತ್ತು ಮಾನವ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ. ಕೇಂದ್ರ ಸಚಿವರು ಎಂಪಿಟಿ ರಸ್ತೆಗೆ ಚಾಲನೆ ನೀಡಿದ ನಂತರ ವಾಸ್ಕೋ ನಗರದ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಾಗಾರ್ಂವ್ನಿಂದ ಕಾಣಕೋಣವರೆಗಿನ ಹೆದ್ದಾರಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಈ ರಸ್ತೆಯೂ ಪೂರ್ಣಗೊಳ್ಳಲಿದೆ. ಅಲ್ಲದೆ, ಉಳಿದ ರಸ್ತೆಗಳನ್ನು ಪೂರ್ಣಗೊಳಿಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ಗಡಿಗಳಲ್ಲಿ ರಸ್ತೆ ಮೂಲಸೌಕರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಮೋಲೆಂ ನಿಂದ ಪಣಜಿ, ಕೇರಿಯಿಂದ ಪಣಜಿ, ಪತ್ರಾದೇವಿಯಿಂದ ಕಾಣಕೋಣವರೆಗಿನ ರಸ್ತೆ ಮೂಲಸೌಕರ್ಯ ಪೂರ್ಣಗೊಂಡಿದೆ. ಜನರ ಅನುಕೂಲಕ್ಕಾಗಿ ಡಬಲ್ ಇಂಜಿನ್ ಸರ್ಕಾರದಿಂದ ಈ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗೋವಾದಲ್ಲಿ ಯಾವುದೇ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ. ಅವರು ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ಅನುಮೋದಿಸಿದ್ದಾರೆ. ಗಡ್ಕರಿ ಅವರ ಪ್ರೇರಣೆಯಿಂದ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಅಲೆಕ್ಸ್ ಸಿಕ್ವೇರಾ, ಮಡಗಾಂವ ಶಾಸಕ ದಿಗಂಬರ ಕಾಮತ್, ಶಾಸಕ ವಿಜಯ್ ಸರ್ದೇಸಾಯಿ ಮತ್ತು ಮಡಗಾಂವ್ ಕಾಪೆರ್Çರೇಟರ್ಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.