ರಬಕವಿ-ಬನಹಟ್ಟಿ : ಕಳೆದ ಹದಿನೈದು ದಿನಗಳ ಹಿಂದೆ ಪ್ರವಾಹ ಆತಂಕ ಸೃಷ್ಠಿ ಮಾಡಿದ್ದ ಕೃಷ್ಣಾ ನದಿ ಕೆಲವು ದಿನಗಳಿಂದ ಇಳಿಮುಖವಾಗಿ ಜನತೆ ನಿರಾಳವಾಗುವಂತೆ ಮಾಡಿತ್ತು. ಈಗ ಮತ್ತೋಮ್ಮೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರನ್ನು ಬೀಡುತ್ತಿರುವುದರಿಂದ ಮಂಗಳವಾರ ಕೃಷ್ಣಾ ನದಿಯಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚುತ್ತಿದೆ.
ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ರಾಜಾಪುರ ಬ್ಯಾರೇಜ್ ನಿಂದ ೭೩,೮೭೫ ಕ್ಯೂಸೆಕ್ ನೀರು ಮತ್ತು ದೂಧಗಂಗಾ ನದಿಯ ೧೯೩೬೦ ಕ್ಯೂಸೆಕ್ ನೀರು ಕೃಷ್ಣಾ ನದಿಯನ್ನು ಸೇರುತ್ತಿದೆ. ಇದರಿಂದಾಗಿ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಮಂಗಳವಾರ ೬೩೨೯೦ ಕ್ಯೂಸೆಕ್ ಒಳ ಹರಿವು ಇದ್ದು, ೬೨೫೪೦ ಕ್ಯೂಸೆಕ್ ಹೊರ ಹರಿವು ಇದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ್ ತಿಳಿಸಿದರು.
ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: ೧೩.೬ ಸೆಂ.ಮೀ, ನವುಜಾ: ೧೩.೯ ಸೆಂ.ಮೀ,  ಮಹಾಬಳೇಶ್ವರ: ೧೪.ಸೆಂ. ಮೀ, ದೂಧಗಂಗಾ: ೧೧.೫ ಸೆಂ.ಮೀ, ರಾಧಾ ನಗರಿ: ೮. ೫ ಸೆಂ.ಮೀ, ವಾರಣಾ: ೮.೫ ಸೆಂ.ಮೀ, ಮಳೆಯಾದ ವರದಿಯಾಗಿದೆ.