ಸುದ್ಧಿಕನ್ನಡ ವಾರ್ತೆ
Goa: ಹಿಂದೂಗಳ ಧಾರ್ಮಿಕ ಉತ್ಸವದಲ್ಲಿ ಮುಸ್ಲೀಮರು ಅಂಗಡಿ ಹಾಕಲು ವಿರೋಧಿಸುವ ಹಿಂಧುತ್ವವಾಧಿಗಳು ಇದೀಗ ಉತ್ತರ ಗೋವಾಕ್ಕೆ ಆಗಮಿಸಿದ್ದು ಡಿಸೆಂಬರ್ 22 ರಿಂದ ಪೆಡ್ನೆ ತಾಲೂಕಿನ ಹಸಾಪುರದಲ್ಲಿ ಸಾತೇರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಅಂಗಡಿ ಹಾಕಲು ತಡೆಯಲಾಗಿದೆ. ಅಂತೆಯೇ ಜಾತ್ರೋತ್ಸವದ ಸ್ಥಳದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಅಂಗಡಿ ಹಾಕಲು ನಿರ್ಭಂಧಿಸುವ ಕುರಿತಂತೆ ಜಾಗೃತಿ ಫಲಕವನ್ನು ಹಾಕಲಾಗಿದೆ.
ಈ ಕುರಿತಂತೆ ದೇವಸ್ಥಾನ ಸಮೀತಿಯ ಅಧ್ಯಕ್ಷ ಸಂತೋಷ ಮಳಿಕ್ ಮಾಹಿತಿ ನೀಡಿ- ಹಸಾಪುರ ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಅಂಗಡಿ ಹಾಕಲು ನಿರ್ಬಂಧ ಹೇರಲಾಗಿದೆ. ಈ ಕುರಿತಂತೆ ಫಲಕ ಹಾಕಿ ಜಾಗೃತಿ ಮೂಡಿಸಲಾಗುತ್ತಿದೆ. ಜಾತ್ರೋತ್ಸವದಲ್ಲಿ ಮುಸ್ಲಿಂ ರೋರ್ವರು ಅಂಗಡಿ ಹಾಕಲು ಸಿದ್ಧಪಡಿಸುತ್ತಿದ್ದರು, ಆದರೆ ದೇವಸ್ಥಾನದ ಪದಾಧಿಕಾರಿಗಳಿಗೆ ಇದು ಗಮನಕ್ಕೆ ಬಂದಕೂಡಲೇ ಕೂಡಲೇ ಸ್ಟಾಲ್ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇನ್ನು ಮುಂದೆ ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಅಂಗಡಿದಾರರಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.