ಸುದ್ಧಿಕನ್ನಡ ವಾರ್ತೆ
Goa : ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಗೋವಾ ವಿಮುಕ್ತಿ ದಿನದ ಅಂಗವಾಗಿ ಗೋವಾ ಕನ್ನಡ ಸಮಾಜ ಪಣಜಿ, ಗೋವಾ ಕೇಸರಿ ಮತ್ತು ಶ್ರೀ ಮೀಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ವಿಮುಕ್ತಿ ಹೋರಾಟಗಾರರಾದ ರೋಹಿದಾಸ (ದಾದ) ನಾಯಕ್ ದೇಸಾಯಿ ರವರನ್ನು ಅವರ ಸ್ವಗ್ರಹದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಪೈ, ಕಾರ್ಯದರ್ಶಿ ಶ್ರೀಕಾಂತ ಲೋಣಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಸಹಕಾರ್ಯದರ್ಶಿ ಪ್ರಹ್ಲಾದ್ ಗುಡಿ, ಗೋವಾಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯರಾದ ಶಾಮಸುದ್ದೀನ ಸೊಲ್ಲಾಪುರಿ, ನೀರಜ್ ದಿವಾಕರ್, ಸಿ.ಜಿ.ಕಣ್ಣೂರ, ಮಂಜುನಾಥ ದೊಡ್ಡಮನಿ ಉಪಸ್ಥಿತರಿದ್ದು ಸ್ವಾತಂತ್ರ್ಯ ಹೋರಾಟಗಾರರನ್ನು ಸತ್ಕರಿಸಿದರು.