ಸುದ್ದಿ ಕನ್ನಡ ವಾರ್ತೆ
ಅಂಕೋಲಾ : ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ಹಾಲಕ್ಕಿ ಸಮುದಾಯದ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ (೮೬) ಸೋಮವಾರ ಸಂಜೆ ವಿದಿವಶರಾದರು.
ಕಳೆದ ಎಂಟು ತಿಂಗಳಿನಿAದ ವಯೋ ಸಹಜ ಖಾಯಿಲೇಗೆ ತುತ್ತಾದ ತುಳಸಿ ಗೌಡರವರು ಆಸ್ಪತ್ರೆ ಸೇರಿದಂತೆ ಅನೇಕ ಕಡೆ ಚಿಕಿತ್ಸೆಯನ್ನು ಪಡೆದು ನಂತರ ಹೊನ್ನಳ್ಳಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಜಗದೀಶ ನಾಯಕ ತುಳಸಿ ಗೌಡ ಮನೆಗೆ ತೆರಳಿ ಮೃತಪಟ್ಟಿರುವುದು ಖಚಿತ ಪಡಿಸಿದ್ದಾರೆ.
ತುಳಸಿ ಗೌಡರವರು ಒರ್ವ ಪುತ್ರ ಮತ್ತು ಪುತ್ರಿ, ಮೊಮ್ಮಕ್ಕಳು ಮರಿಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಈ ಪರಿಸರವೇ ತನ್ನ ಉಸಿರು ಎಂದು ತಮ್ಮ ಜಿವನದುದ್ದಕ್ಕೂ ಮರಗಳ ಬೆಳೆಸಿ ಪಾಲನೇ ಪೊಷಣೆ ಮಾಡುವ ಮೂಲಕ ವೃಕ್ಷ ಮಾತೆ ಎಂದೆ ಕರೆಯಲ್ಪಡುತ್ತಿದ್ದ ತುಳಸಿ ಗೌಡರವರು ಶಾಲೆಯನ್ನು ಕಲಿಯದಿದ್ದರು ಶಾಲಾ ಮಕ್ಕಳಿಗೆ ಗಿಡವನ್ನು ಬೆಳೆಸುವ ತರಬೇತಿ ನೀಡುತ್ತಿದ್ದರು. ತಮ್ಮ ಬದುಕಿನೂದ್ದಕ್ಕು ಮರಗಳೊಂದಿಗಿನ ಇವರ ಬದುಕು ೮೬ಕ್ಕೆ ಅಂತಿಮವಾಗಿದೆ. ಇವರ ಅಂತಿಮ ಸಂಸ್ಕಾರ ಮಂಗಳವಾರ ಮುಂಜಾನೆ ೧೧ ಗಂಟೆಗೆ ಹೊನ್ನಳ್ಳಿಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂತಾಪ
ಸAಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ, ಅಗಸೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗೊಪು ನಾಯಕ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.