ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ
ರಸ್ತೆ ಬದಿಯಲ್ಲಿನ ಬೈಕ್ ಗೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ ನಂತರ ಪಲ್ಟಿ ಬಿದ್ದು ಓರ್ವ ಸ್ಥಳದಲ್ಲಿ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ಶನಿವಾರ ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ ೬೩ ರಲ್ಲಿ ಕಿರವತ್ತಿ ಬಳಿ ಸಂಭವಿಸಿದೆ.
ಬೆಳಗಿನ ಜಾವ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರರಾದ ತೇಜು ಕೋಡೆ 32 ವರ್ಷ ಹಾಗೂ ಲಕ್ಷ್ಮಣ ರಾವೂರ್ 22ವರ್ಷ ಎಂಬುವರು ತಮ್ಮ ದ್ವಿಚಕ್ರವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಕ್ರೂಸರ್ ವಾಹನ ಚಾಲಕನು ಅತಿವೇಗದಿಂದ ಹೋಗಿ ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದ್ದ ಬೈಕ್ ಮತ್ತು ಬೈಕ್ ಸವಾರರಿಗೆ ಡಿಕ್ಕಿಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಕ್ರೂಸರ್ ವಾಹನದಲ್ಲಿದ್ದ ಬಾಗಲಕೋಟೆ ಜಿಲ್ಲೆ ಮುದೋಳ ತಾಲೂಕಿನ ಲಕಮ್ಮ ಖಾಸಗಿ ಶಾಲೆಯ ಶಿಕ್ಷಕ ಹನುಮಂತಪ್ಪ 40 ವರ್ಷ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೈಕ್ ಸವಾರರಾದ ತೇಜು ಕೋಡೆ ಲಕ್ಷ್ಮಣ ರಾವೂರ್ ಇಬ್ಬರೂ ಬೆಳಗಾವಿಯವರಾಗಿದ್ದು ಹಾಗೂ ಕ್ರೂಸರ್ ವಾಹನದಲ್ಲಿದ್ದ ಬಾಗಲಕೋಟೆಯ ಮುಧೋಳದವರಾದ ಲಕ್ಕಮ್ಮ ಖಾಸಗಿ ಶಾಲೆಯ ಅಡುಗೆಯವರಾದ ಲಕ್ಕವ್ವ 50 ವರ್ಷ, ಶಾಂತವ್ವ ಬಡಿಗೇರ್ 45 ವರ್ಷ, ಬಸು ಕುಂಬಾರಪ್ಪ 44 ವರ್ಷ, ಶಿಕ್ಷಕರಾದ ಬಸವರಾಜ್ ಕುಂಬಾರ್ 45 ವರ್ಷ, ಚಾಲಕನಾದ ಪ್ರಬು ಯಾದವ್ 26 ವರ್ಷ ಬಸವರಾಜ್ ಹೂಗಾರ್ 32 ಗಾಯಾಳುಗಳಾಗಿದ್ದು ತಾಲೂಕಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿ ಕೀಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
—————————