ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ಃ
ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಂ. ಪಂ.ವ್ಯಾಪ್ತಿಯ. ಮಾಗೋಡ ಗ್ರಾಮದ ಬಾಳಿಗದ್ದೆ ಹತ್ತಿರ ನಾಳಿಸರದ ಹರೀಶ ಅರ್ಜುನ ಸಿದ್ದಿ ವಯಸ್ಸು 27 ಎಂಬಾತ ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ್ದಾನೆ.
ಈತನು ತನ್ನ ಮನೆಯಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಮೊಬೈಲ್ ಚಾರ್ಜ ಹಾಕುವ ಸಮಯದಲ್ಲಿ ಸಿಡಿಲು ಬಡಿದಿದ್ದರಿಂದ ಕುಸಿದುಬಿದ್ದಿದ್ದು ತಕ್ಷಣ ಆತನ ಮನೆಯವರು ತಾಲೂಕಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.ಆದರೆ ಅಷ್ಟೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು.
———————————