ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರ ಗೋವಾದ ಶಾಸಕರೋರ್ವರ ಆಕ್ಷೇಪಾರ್ಹ ವಿಡಿಯೋವೊಂದು ಟ್ವಿಟರ್‍ನಲ್ಲಿ ವೈರಲ್ ಆಗಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ರೋಚಕತೆ ಮೂಡಿಸಿದೆ. ಆರೋಪಿ ಪೆÇಲೀಸರ ವಶದಲ್ಲಿರುವಾಗಲೇ ವಿಡಿಯೋ ಬಿಡುಗಡೆಯಾಗಿರುವುದು ಎಲ್ಲ ಕಡೆಯಿಂದ ಅಚ್ಚರಿ ಮೂಡಿಸಿದೆ. ಈ ಮಾರ್ಫ್ ಮಾಡಿದ ವೀಡಿಯೋ ಆಧಾರದಲ್ಲಿ ಆರೋಪಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಶಾಸಕರು ದೂರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಮಾರ್ಫ್ ಮಾಡಿದ ಶಾಸಕರೊಬ್ಬರ ಅಶ್ಲೀಲ ವಿಡಿಯೋವನ್ನು ಅಪ್‍ಲೋಡ್ ಮಾಡಿ ತಮ್ಮ ಹೆಸರಿಗೆ ಮಾನಹಾನಿ ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಕುಕೇಶ್ ರಾವ್ತಾ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ. ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಹಿಂಪಡೆದಿರುವುದರಿಂದ ಪ್ರಕರಣ ಈಗ ಬೇರೆಯದೇ ತಿರುವು ಪಡೆಯುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.
ಶಾಸಕರಿಗೆ ಬೆದರಿಕೆ ಹಾಕಿದ್ದ ಒಡಿಶಾ ಮೂಲದ 25 ವರ್ಷದ ಕುಕೇಶ್ ರಾವ್ತಾ ಎಂಬಾತನನ್ನು ಬಂಧಿಸಿ, ಆತನ ಮೊಬೈಲ್ ಫೆÇೀನ್ ಅನ್ನು ಅಪರಾಧ ತಡೆ ವಿಭಾಗದ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ಕುಕೇಶ್ ಅವರು 5 ಡಿಸೆಂಬರ್ 2023 ಕ್ಕಿಂತ ಮೊದಲು ವೀಡಿಯೊ ಕರೆ ಮೂಲಕ ಹೇಳಿದ ಶಾಸಕರನ್ನು ಸಂಪರ್ಕಿಸಿದ್ದರು. ಈ ವಿಡಿಯೋ ಕಾಲ್ ರೆಕಾರ್ಡ್ ಮಾಡಿದ ಬಳಿಕ ಮಹಿಳೆಯೊಂದಿಗೆ ಮಾರ್ಫ್ ಮಾಡಿ ಅಶ್ಲೀಲ ವಿಡಿಯೋ ಸೃಷ್ಟಿಸಿದ್ದ. ಬಳಿಕ ಈ ವಿಡಿಯೋವನ್ನು ಶಾಸಕರಿಗೆ ಕಳುಹಿಸಿ ರೂ. 5 ಕೋಟಿ ಬೇಡಿಕೆ ಇಟ್ಟಿದ್ದ. ಇದೇ ವೇಳೆ ಶಾಸಕರು ಆರಂಭದಲ್ಲಿ 55 ಸಾವಿರ, ನಂತರ 5 ಲಕ್ಷ ರೂ. ಹಣ ನೀಡಿದ್ದರು ಎನ್ನಲಾಗಿದೆ.