ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಭಜನಾ ಮಂಡಳಿಯ ಈ ವರ್ಷದ ಉತ್ತಮ ಸಂಘಟನೆಯು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಸಮೀತಿಯ ಕಾರ್ಯದರ್ಶಿ ಶ್ರೀರಾಮ ಭಟ್ ಕುಂಟೆಕುಳಿ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದರು. ಅಧ್ಯಕ್ಷರಾದ ಅನಂತ ಭಟ್ ಮೋಟಾರಿ ಅಭಿನಂದಿಸಿದರು.

ಕಾರ್ಯಕ್ರಮದ ಮೂರೂ ದಿನವೂ ಕೂಡ ಗ್ರಾಮಸ್ಥರು,ಭಕ್ತಾದಿಗಳು ತಮ್ಮ ಕೆಲಸಗಳನ್ನು ಬದಿಗೊತ್ತಿ ಈ ಕಾರ್ಯಕ್ರಮಕ್ಕೆ ಸೇರಿದ್ಧ ಜನಸ್ತೋಮ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಭಜನಾ ಕಾರ್ಯಕ್ರಮದ ಮೂಲಕ ಊರಿನ ಒಗ್ಗಟ್ಟು ಹಾಗೂ ಸಂಘಟನಾ ಶಕ್ತಿಗೆ ಸಾಕ್ಷಿಯಾಯಿತು.

ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ಮೂರೂ ದಿನವೂ ಒಂದೇ ತರಹದ ಸಮವಸ್ತ್ರ ಧರಿಸಿ ಭಜನಾ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದು ಶಿಸ್ತು ಮತ್ತು ವೈಶಿಷ್ಠ್ಯಗಳಿಗೆ ಕಾರಣವಾಯಿತು. ಒಟ್ಟಾರೆ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನವು ಈ ಮೂರೂ ದಿನವೂ ಹಬ್ಬದ ವಾತಾವರಣವಾಗಿ ಕಂಡುಬಂತು.