ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ 9 ದಿನಗಳ ಕಾಲ ಗೋವಾದಲ್ಲಿ ನಡೆದ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನವೆಂಬರ್ 28 ರಂದು ಗುರುವಾರ ತೆರೆ ಬಿದ್ದಿದೆ. ಕಳೆದ 9 ದಿನಗಳ ಕಾಲ ಗೋವಾದಲ್ಲಿ ಜಗತ್ತಿನಾದ್ಯಂತ ಚಲನಚಿತ್ರ ಪ್ರೇಮಿಗಳು ಹಾಗೂ ಚಲನಚಿತ್ರ ಕಲಾವಿದರು ಚಿತ್ರೋತ್ಸವವನ್ನು ಆನಂದಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ-ಗೋವಾದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಿಂದಾಗಿ ಗೋವಾ ರಾಜ್ಯ ಜನಗತ್ತಿನ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಸಾಧ್ಯವಾಗುತ್ತಿದೆ. ಗೋವಾದಲ್ಲಿ ಚಲನಚಿತ್ರೋತ್ಸವ ಆಯೋಜನೆಯಿಂದಾಗಿ ಗೋವಾದಲ್ಲಿ ವಿದೇಶೀಯ ಚಲನಚಿತ್ರಗಳೂ ಚಿತ್ರೀಕರಣಗೊಳ್ಳುತ್ತಿದೆ. ಗೋವಾದಲ್ಲಿ ಕಳೆದ 9 ದಿನಗಳ ಕಾಲ ಚಲನಚಿತ್ರ ಪ್ರೇಮಿಗಳು ಆನಂದಿಸಿದ್ದಾರೆ. ಪ್ರಸಕ್ತ ವರ್ಷ ಚಲನಚಿತ್ರೋತ್ಸವದಲ್ಲಿ ಗೋವಾದ ಸಂಸ್ಕøತಿಯನ್ನು ಪ್ರದರ್ಶಿಸಲಾಗಿದೆ. ಕಾರ್ನಿವಲ್, ಶಿಗ್ಮೋತ್ಸವದಂತಹ ಪ್ರದರ್ಶನಗಳು ಕೂಡ ನಡೆದಿದೆ ಎಂದರು.

ಗೋವಾದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಸಂಜಯ ಜಾಜು ಮಾತನಾಡಿ- ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಒದು ದೊಡ್ಡ ವೇದಿಕೆ. ಇಲ್ಲಿ ಆಯೋಜನೆಯಾಗುವ ಫಿಲ್ಮ ಬಜಾರ ಜಗತ್ತಿನ ಎಲ್ಲೆಡೆಯ ಚಲನಚಿತ್ರಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಿಕೊಡುತ್ತಿದೆ ಎಂದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪದಲ್ಲಿ ಇಂಡಿಯನ್ ಫಿಚ್ಚರ್ ಫಿಲ್ಮ ಅವಾರ್ಡ ನಜ್ಯೂತ್ ಬಾಂದಿವಾಡಕರ್, ಬೆಸ್ಟ ವೆಬ್ ಸಿರೀಸ್ ನಿರ್ದೇಶಕ ಲಂಪಕ್, ಮಹಾತ್ಮಾಗಾಂಧಿ ಯುನೆಸ್ಜೊ ಅವಾರ್ಡ-ಲಿವಾನ್ ಆಕೆನ್, ಸತ್ಯಜಿತ್ ರೈ ಸಿನೆಮಾ ಅವಾರ್ಡ -ಫಿಲಿಪ್ ನೋಯಸ್, ಬೆಸ್ಟ ಫಿಲ್ಮ ಅವಾರ್ಡ-ಸಾರಸ್ ಪೆಡ್ಲಂಡ್, ಸ್ಪೆಶಲ್ ಜ್ಯೂರಿ ಅವಾರ್ಡ- ಲೂಯಿಸ್ ಕೊರವೈಸರ್, ಉತ್ತಮ ನಟಿ ಪ್ರಶಸ್ತಿ-ವೆಸ್ಟಾ ಮತ್ತು ಲೇವಾ, ಉತ್ತಮ ನಟ-ಕ್ಲೆಮೆಂಟ್ ಪವೊ, ಉತ್ತಮ ನಿರ್ದೇಶಕ ಪ್ರಶಸ್ತಿ- ಬೋಗ್ದಾನ್ ಮೊರೆಶಾನು, ಗೋಲ್ಡನ್ ಪಿಕಾಕ್ ಅವಾರ್ಡ- ಟ್ಯಾಕ್ಸಿಕ್ ಚಲನಚಿತ್ರಕ್ಕೆ (40, ಲಕ್ಷ), ಇಂಡಿಯನ್ ಫಿಲ್ಮ ಫರ್ಸನಾಲಿಟಿ ಇಯರ್- ವಿಕ್ರಾಂತ್ ಮಾಸೆ ರವರಿಗೆ ನೀಡಲಾಯಿತು. ಪುಷ್ಪ ಚಲನಚಿತ್ರ ತಂಡವನ್ನೂ ಸನ್ಮಾನಿಸಲಾಯಿತು.

ನವೆಂಬರ್ 20 ರಂದು ಉಧ್ಘಾಟನೆಗೊಂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಳೆದ 9 ದಿನಗಳ ಕಾಲ ಜಗತ್ತಿನಾದ್ಯಂತ ಆಯ್ದ ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಇಷ್ಟೇ ಅಲ್ಲದೆಯೇ ಪ್ರಸಕ್ತ ವರ್ಷ ಚಲನಚಿತ್ರೋತ್ಸವದಲ್ಲಿ ಹಲವು ಹೊಸತನವನ್ನು ನೀಡಲಾಗಿರುವುದು ವಿಶೇಷವಾಗಿತ್ತು.