ಸುದ್ದಿ ಕನ್ನಡ

ಶಿರಸಿ .​ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳವು ಎನ್‌ಡಿಎ (NDA) ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವುದು ಒಂದು ಐತಿಹಾಸಿಕ ನಿರ್ಣಯವಾಗಿದೆ. ಎಂದು ಉತ್ತರ ಕನ್ನಡ ಜಿಲ್ಲಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹರ್ಷ ವ್ಯಕ್ತ ಪಡಿಸಿದ್ದಾರೆ. ನಮ್ಮ ಹಳೆಯ ಮಿತ್ರಪಕ್ಷವು ಮತ್ತೆ. ನಮ್ಮ ಜೊತೆ ಕೈಜೋಡಿಸಿರುವುದು ಒಕ್ಕೂಟಕ್ಕೆ ಆನೆಬಲ ನೀಡುವುದಲ್ಲದೆ, ರಾಷ್ಟ್ರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ.ಎಂದಿದ್ದಾರೆ.

 

​ಬದಲಾವಣೆಯನ್ನು ಬಯಸುತ್ತಿರುವ ಪಂಜಾಬ್‌ನ ಜನತೆಗೆ ಈ ಮೈತ್ರಿಕೂಟವು ಅತ್ಯಂತ ವಿಶ್ವಾಸಾರ್ಹ ಆಯ್ಕೆಯಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ಜನತೆಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಹಾಗೂ ಉತ್ತಮ ಆಡಳಿತ ನೀಡಲು ಈ ಮೈತ್ರಿಯು ಅತ್ಯಂತ ಸಹಕಾರಿಯಾಗಲಿದೆ.

​ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ನಾನು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳುವ ಮೂಲಕ ವಿಶ್ವೇಶ್ವರ ಹೆಗಡೆ ಕಾಗೇರಿ
ಸಂಸದರು ಹರ್ಷ ವ್ಯಕ್ತಪಡಿಸಿದ್ದಾರೆ.