ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕುಂಬಾರವಾಡದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿರಾಮನಗರದ ಹನುಮಾನಲೇನ್
ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕ್ರೀಡಾ ಸಾಧನೆಗಳು,ಕ್ರೀಡಾ ಸ್ಪರ್ಧೆಗಳು:100 ಮೀಟರ್ ಓಟ ಬಾಲಕಿಯರ ವಿಭಾಗ 3ನೇ ಸ್ಥಾನ ದುರ್ಗಾ ಗಾವಡಾ.
80 ಮೀಟರ್ ಹರ್ಡಲ್ಸ್ ಬಾಲಕರ ವಿಭಾಗ ಪ್ರಫುಲ್ ಮಿರಾಶಿ 3 ನೇ ಸ್ಥಾನ.
100 ಮೀಟರ್ ಓಟ ಬಾಲಕಿಯರ ವಿಭಾಗ ದುರ್ಗಾ ಗಾವಡಾ 3 ನೇ ಸ್ಥಾನ ಸಾಧನೆ ಮಾಡಿರುತ್ತಾರೆ.
ಅದಲ್ಲದೇ 80 ಮೀಟರ್ ಹರ್ಡಲ್ಸ್ ಬಾಲಕಿಯರ ವಿಭಾಗ 2 ನೇ ಸ್ಥಾನ ಸಮೀಕ್ಷಾ ಪಾಟೀಲ.
ಹೈಜಂಪ್ ಬಾಲಕರ ವಿಭಾಗ 2 ನೇ ಸ್ಥಾನ ಶ್ರೇಯಸ್ ಗಾಂವಕರ.
ಹೈಜಂಪ್ ಬಾಲಕಿಯರ ವಿಭಾಗ 2 ನೇ ಸ್ಥಾನ ಸಮೀಕ್ಷಾ ಪಾಟೀಲ. ಗುಂಪು ಆಟ ವಿಭಾಗದ ಕಬಡ್ಡಿ ದ್ವಿತೀಯ ಸ್ಥಾನ. 100 ಮೀಟರ್ ಬಾಲಕರ ವಿಭಾಗ 1 ನೇ ಸ್ಥಾನ ಶ್ರೇಯಸ್ ಗಾಂವಕರ.
400 ಮೀಟರ್ ಓಟ ಬಾಲಕರ ವಿಭಾಗ 1ನೇ ಸ್ಥಾನ ಪ್ರಜ್ವಲ್ ಮಿರಾಶಿ ಸಾಧನೆ ಮಾಡಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ತಾಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು,ಶಿಕ್ಷಕ ವೃಂದದವರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ,ಉಪಾಧ್ಯಕ್ಷೆ ವಿನಂತಿ ಸೋಲೇಕರ,ಸರ್ವ ಸದಸ್ಯರು, ಪಾಲಕ-ಪೋಷಕರು,ಗಣ್ಯರು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ.ಹೆಚ್. ಭಾಗವಾನ,ಸಹ ಶಿಕ್ಷಕರಾದ ಮಂಜುನಾಥ ಕೋಟಬಾಗಿ,ಸಹ ಶಿಕ್ಷಕಿಯರಾದ ನಾಗರತ್ನಾ ಮೋಗೇರ, ಸುನೀತಾ ಆರ್,ಅನೀಸ್ ಫಾತಿಮಾ,ಸಂಜನಾ ಮಿರಾಶಿ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ಮಾಡಿರುತ್ತಾರೆ.
ಹನುಮಾನಲೇನ್ (ರಾಮನಗರ) ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ
