ಸುದ್ದಿ ಕನ್ನಡ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರಬೋಧೋತ್ಸವ ಹಾಗೂ ತುಳಸಿ ವಿವಾಹ ಮಹೋತ್ಸವವು ಅತ್ಯಂತ ಭಕ್ತಿಭಾವ, ಶ್ರದ್ಧೆ ಹಾಗೂ ಸಂಭ್ರಮದಿಂದ ಸಂಪನ್ನಗೊಂಡಿತು.

 

ಶ್ರೀ ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.ಭಗವಾನ್ ಶ್ರೀ ಮಹಾವಿಷ್ಣುವನ್ನು ಯೋಗನಿದ್ರೆಯಿಂದ ಎಚ್ಚರಿಸುವ ‘ಪ್ರಬೋಧೋತ್ಸವ’ದ ಧಾರ್ಮಿಕ ಕ್ರಿಯೆಗಳು ವೇದಘೋಷಗಳೊಂದಿಗೆ ನೆರವೇರಿದವು. ಈ ಪವಿತ್ರ ಸಮಾರಂಭದಲ್ಲಿ ಯತಿದ್ವಯರು ದಿವ್ಯ ಉಪಸ್ಥಿತರಿದ್ದು, ನೆರೆದಿದ್ದ ಭಕ್ತವೃಂದಕ್ಕೆ ಮಂತ್ರಾಕ್ಷತೆ, ಪ್ರಸಾದ ನೀಡಿ ಆಶೀರ್ವದಿಸಿದರು.