ಸುದ್ದಿ ಕನ್ನಡ ವಾರ್ತೆ
ಶಿರಸಿ: ಬನವಾಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಮಿಂಚಿನ ಕಾರ್ಯಚರಣೆ ನಡೆಸಿ ಕಳುವಾದ
ಬೆಲೆ ಬಾಳುವ ಸಾಗವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡು ಆರೋಪಿ ಬಂಧಿಸಿದ್ದಾರೆ.
ತಾಲೂಕಿನ ಕುಪ್ಪಗಡ್ಡೆಯ ಸುನೀಲ್ ಮಲ್ಲೇಶಪ್ಪ ಮಡಿವಾಳ ಹಾಗು ಸದ್ದಾಂ ಹುಸೆನ್ ಅಬ್ದುಲ್ ಜಬ್ಬಾರ್ ಶೇಖ ಇವರನ್ನು ಬಂಧಿಸಿ ಇವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 10 ಸಾಗವಾನಿ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯಶಸ್ವಿಯಾಗಿದ್ದಾರೆ. ಆರೋಪಿಗಳು ಬೆಳ್ಳನೆಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮರದ ತುಂಡುಗಳನ್ನು ಕದ್ದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾದಿಕಾರಿ ಡಾ.ಅಜ್ಜಯ್ಯ ಜಿ ಆರ್ ಮಾರ್ಗದರ್ಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿಗಳಾದ ಎಸ್. ಎಸ್. ನಿಂಗಾಣಿ ಮತ್ತು ವಲಯ ಅರಣ್ಯಾದಿಕಾರಿ ಭವ್ಯ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾದಿಕಾರಿ ಕಾರ್ತಿಕ ನಾರ್ವೇಕರ್, ಮಾಲ್ತೇಶ ಬಾರ್ಕಿ ಅರಣ್ಯ ಪಾಲಕರಾದ ವಿದ್ಯಾಶ್ರೀ ಜಾದವ, ರಮೇಶ ಎಚ್ ಸಿ, ಸಿದ್ದು ನಾವಿ ಹಾಗು ಸಿಬ್ಬಂದಿ ನನ್ನೇಸಾಬ್ ಹುಸೇನ್ ಪಾಲ್ಗೊಂಡಿದ್ದರು.