ಸುದ್ದಿ ಕನ್ನಡ
ಜೊಯಿಡಾ ತಾಲೂಕಿನಲ್ಲಿ ಹಾದು ಹೋದ ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ 34 ನ್ನು ಸರಿಪಡಿಸುವಂತೆ ಒತ್ತಾಯಿಸಿ ಇಂದು ಅಣಶಿಯಲ್ಲಿ ರಸ್ತಾ ರೋಖೋ ಮತ್ತು ಭಾರಿ ಪ್ರತಿಭಟನೆ ನಡೆಯಿತು.
. ತಹಶಿಲ್ದಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವೆಂಬರ್ 30ರ ಒಳಗೆ ರಸ್ತೆ ಕಾಮಗಾರಿ ಪ್ರಾರಂಭಿಸುವ ಆಶ್ವಾಸನೆ ಯನ್ನು ಲೋಕೋಪಯೋಗಿ ಇಲಾಖೆ ನೀಡಿತು . ಲೋಕೋಪಯೋಗಿ ಇಲಾಖೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು. ಕುಣಬಿ ಸಮಾಜ ಹಾಗೂ ಸ್ಥಳೀಯರು ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು .

ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ 34 ನುಜ್ಜಿ ಇಂದ ಬಾಡಪೋಲಿ ತನಕ ಸಂಪೂರ್ಣ ಹಾಳಾಗಿದ್ದು, ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗುವ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗರ್ಭಿಣಿ ಬಾಣಂತಿಯರೂ ಸೇರಿದಂತೆ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜನರು ಲೋಕೋಪಯೋಗಿ ಇಲಾಖೆ ವಿರುದ್ಧ ಹರಿಹಾಯ್ದರು. ಬೇಕೆ ಬೇಕು ನ್ಯಾಯ ಬೇಕು, ಲೋಕೋಪಯೋಗಿ ಇಲಾಖೆಗೆ ಧಿಕ್ಕಾರ, ಎಲ್ಲಿಯವರೆಗೆ ಹೋರಾಟ ಗೆಲ್ಲುವ ವರೆಗೆ ಹೋರಾಟ ಎಂದು ಘೋಷಣೆ ಮಾಡಲಾಯಿತು.
ಪ್ರಯಾಣಿಕರಿಗೆ ತೊಂದರೆ.
ಅಣಶಿ ಯಲ್ಲಿ ನಡೆದ ರಸ್ತೆ ತೊಡೆಯಿಂದ ನೂರಾರು ವಾಹನ ಸವಾರರಿಗೆ ತೊಂದರೆ ಉಂಟಾಯಿತು . ಅನೇಕ ಬಸ್, ಜಿಪ್, ಕಾರು, ದ್ವಿಚಕ್ರ ವಾಹನ ಸವಾರರು ಪರದಾಡು ವಂತಾಯಿತು.
ತಹಶೀಲ್ದಾರ್ ಗೆ ಮನವಿ.
ನವೆಂಬರ್ 30 ಒಳಗೆ ರಸ್ತೆ ಬಿ ಎಮ್ ಡಬ್ಲು ಮಿಕ್ಸಿಂಗ್ ಹಾಕಿ ಸರಿಪಡಿಸುವುದು. ಮತ್ತು ಪ್ರತಿ ದಿನ ರೂಲಿಂಗ್ ಮಾಡಿ ನೀರು ಹಾಕುವುದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಮಾಡದೇ ಇದ್ದರೆ ಕಚೇರಿ ಎದುರು ನಿರಂತರ ಹೋರಾಟ ಮಾಡುವ ಮನವಿ ತಹಶೀಲ್ದಾರ್ ಗೆ ನೀಡಲಾಯಿತು. ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಬಸವರಾಜ ಎಸ್ ಇದನ್ನು ಒಪ್ಪಿಕೊಂಡಿರುತ್ತಾರೆ. ತಹಶೀಲ್ದಾರ್ ಪ್ರಕಾಶ್ ಕಲ್ಲೊಳ್ಳಿ ಮನವಿ ಸ್ವೀಕರಿಸಿದರು. ಸಿಪಿಐ ಚಂದ್ರಶೇಖರ ಹರಿಹರ, ಪಿಎಸ್ಐ ಜಗದೀಶ ನಾಯ್ಕ ಸಹಕರಿಸಿದರು.
ಅಧಿಕಾರಿಗಳ ತರಾಟೆ.
ಸದಾಶಿವ ಔರಾದ್ ರಾಜ್ಯ ಹೆದ್ದಾರಿ 34 ಅಭಿವೃದ್ಧಿ ಪಡಿಸಲು 3 ಕೋಟಿ ಅನುದಾನವನ್ನು ಶಾಸಕ ಆರ್ ವಿ ದೇಶಪಾಂಡೆ ಮಂಜೂರು ನೀಡಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಪ್ರತಿಭಟನಾಕಾರರ ಬಂಧನ
ಅಣಶಿ ಯಲ್ಲಿ ರಸ್ತೆ ತಡೆ ನಡೆಯುತ್ತಿದ್ದಂತೆ ಜೊಯಿಡಾ ಪೋಲಿಸರು ಪ್ರತಿಭಟನೆ ನಡೆಸುತ್ತಿದ್ದ ಮುಖಂಡರನ್ನು ಬಂಧಿಸಿದರು.
ಪ್ರೇಮಾನಂದ ವೆಳಿಪ ಕುಣಬಿ ಸಮಾಜ,ಅಧ್ಯಕ್ಷರು,ಸುಭಾಷ್ ಗಾವಡಾ ಅಧ್ಯಕ್ಷರು ಜಿಲ್ಲಾ ಕುಣಬಿ ಸಮಾಜ, ರವಿ ರೆಡಕರ್, ಅಜಿತ್ ಮಿರಾಶಿ, ದಯಾನಂದ ಕುಮಗಾಳಕ, ರಾಜಕುಮಾರ ವೇಳಿಪ,ಎಂ ಎಸ್ ಕಾಜುಗಾರ, ಕೃಷ್ಣ ಅಣಶಿಕರ, ಅಲಕೇಶ ದೇಸಾಯಿ, ಅಖಿಲ ದೇಸಾಯಿ, ಸುರೇಶ್ ಗಾವಡಾ, ವಿನೋದ್ ದೇಸಾಯಿ, ಗಜಾನನ ವೇಳಿಪ, ವಸಂತ ವೇಳಿಪ, ಪ್ರಭಾಕರ ನಾಯ್ಕ, ಸದಾಶಿವ ದೇಸಾಯಿ,ಇವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಕೃಷ್ಣ ಮಿರಾಶಿ, ದಿವಾಕರ ಕುಂಡಲಕರ, ಪುಷ್ಪಾ ವೇಳಿಪ, ಸತೀಶ್ ದೇಸಾಯಿ, ರಾಮಕೃಷ್ಣ ಪೇಡ್ನೆಕರ, ಸಂದೀಪ್ ನಾಯ್ಕ,, ವಿನಯ ದೇಸಾಯಿ, ಅರುಣ್ ಕಾಮರೇಕರ, ಮಾಬಳು ಕುಂಡಲಕರ, ಆಕಾಶ್ ಅನಸ್ಕರ್, ಸುಭಾಷ್ ವೇಳಿಪ, ಸಿದ್ದು ಜೊಕೆರ, ರಾಜೇಶ್ ದೇಸಾಯಿ, ನಾಮದೇವ ಗಾವಡಾ, ಗಜಾನನ ನಾಯ್ಕ, ಸೀತಾರಾಮ ಅಣಶಿಕರ, ವಿರೇಂದ್ರ ಗಾವಡಾ, ಶಶಿಕಾಂತ ದೇಸಾಯಿ, ಮಾಮನ ದೇಸಾಯಿ, ಕೃಷ್ಣ ಮಸ್ಕರ,ಇತರರು ಇದ್ದರು.
