ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಗಾಂಗೋಡ ಗ್ರಾಮದ ರಸ್ತೆಯನ್ನು ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ಪ್ರವೀಣ್ ದೇಸಾಯಿ ಅವರು ತಮ್ಮ ಕರ್ಚಿ ನಿಂದಲೇ ಮಾಡುವ ಮೂಲಕ, ಮಾನವೀಯತೆ ಮೆರೆದಿದ್ದಾರೆ.
ಗಾಂಗೋಡಾ ಕ್ಕೆ ಬಿಡುವ ಬಸ್ಸು ಮಳೆಗಾಲದ ನಿಮಿತ್ತ ಬಂದಾಗಿದೆ. ಈ ರಸ್ತೆಯನ್ನು ರಿಪೇರಿ ಮಾಡಿಕೊಟ್ಟರೆ, ಸತ್ಯಾಗ್ರಹ ಮಾಡುತ್ತೇವೆ, ಬಸ್ ಬಿಡಿ ಎಂದರೆ ಮಾತ್ರ ಬಸ್ ಬಿಡುತ್ತಾರೆ ಇದು ಪ್ರತಿ ವರ್ಷ ನಡೆಯುತ್ತಿದೆ , ಗ್ರಾಮದ ಜನತೆಯ ಬಗ್ಗೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿದಿ ಗಳಾಗಲಿ, ಪ್ರಯತ್ನ ಮಾಡೋದಿಲ್ಲ, ಗ್ರಾಮಸ್ಥರೇ ಮಾಡಿಕೊಳ್ಳಬೇಕು.
ಸದ್ಯ ಕರಂಬಾಳಿ ವರೆಗೆ ಬರುವ ಬಸ್ಸಿಗೆ ಗಾಂಗೋಡಾ ದ ವಿದ್ಯಾರ್ಥಿಗಳು ಏಳು ಕಿಲೋ ಮೀಟರ್ ನಡೆದು ಬರುತ್ತಿದ್ದಾರೆ , ಈ ಏಳು ಕಿಲೋ ಮೀಟರ್ ರಸ್ತೆಯನ್ನು ಪ್ರವೀಣ್ ದೇಸಾಯಿ,ಅವರು ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಮತ್ತು ಗ್ರಾಮದ ಜನರ ಮೇಲಿನ ಪ್ರೀತಿಯಿಂದ ಮಾಡಿಸಿಕೊಟ್ಟಿದ್ದಾರೆ. ಜಿಲ್ಲಾ ಪಂಚಾಯತ್ ಅಧಿಕಾರಿ ಗಳು,ಶಾಸಕರು, ಜನಪ್ರತಿನಿದಿಗಳು ಗಾಂಗೋಡಾ ಕ್ಕೆ ಸರ್ವ ಋತು ರಸ್ತೆಯನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿರ್ಮಿಸಿ ಕೊಡಬೇಕು ಎಂದು ಮರಾಠ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ ಹೇಳಿದ್ದಾರೆ.
ಸದ್ಯ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷ ಪ್ರವೀಣ ದೇಸಾಯಿ ನಿರ್ಮಿಸಿ ಕೊಟ್ಟ ರಸ್ತೆಯಲ್ಲಿ ಸಾರಿಗೆ ಇಲಾಖೆ ಯವರು ಗಾಂಗೋಡಾ ವರೆಗೆ ಬಸ್ ಬಿಟ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
