ಸುದ್ದಿ ಕನ್ನಡ ವಾರ್ತೆ
ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿರುವ ಗೋವಾ ರಾಜ್ಯ ಪ್ರವಾಸಿ ಸೀಸನ್ ಆರಂಭಗೊಂಡಿದ್ದು ದೇಶ ವಿದೇಶಗಳಿಂದ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಗೋವಾಕ್ಕೆ ಹೆಚ್ಚಿನ ಪ್ರವಾಸಿಗರ ಆಗಮನದಿಂದಾಗಿ ಸದ್ಯ ಗೋವಾದ ಎಲ್ಲ ಮುಖ್ಯರಸ್ತೆಗಳು ಭಾರಿ ಟ್ರಾಫಿಕ್ ಜಾಮ್ ನಿಂದ ಕೂಡಿರುವ ದೃಶ್ಯ ಕಂಡುಬರುತ್ತದೆ.
ಗೋವಾ ರಾಜ್ಯವು ಸುಂದರ ಕಡಲ ತೀರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಪುರಾತನ ದೇವಾಲಯಗಳು ಧಾರ್ಮಿಕ ಪ್ರವಾಸೋದ್ಯಮ ಹೆಚ್ಚಳಕ್ಕೂ ಕಾರಣವಾಗಿದೆ. ಗೋವಾ ರಾಜ್ಯದ ವಿವಿಧ ಅಡಿ ಇರುವ ಪುರಾತನ ದೇವಾಲಯಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಗೋವಾದಲ್ಲಿ ಅಂತೆ ಹತ್ತಾರು ಬೀಚ್ ಗಳು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇಲ್ಲಿ ನದಿ ಸಮುದ್ರಗಳಲ್ಲಿ ಬೋಟಿಂಗ್ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಗೋವಾದಲ್ಲಿ ಪ್ರಸಿದ್ಧ ಜಲಪಾತಗಳು ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಅಕ್ಟೋಬರ್ 1ರಿಂದ ಪ್ರಸಕ್ತ ಪ್ರವಾಸಿ ಸೀಸನ್ ಆರಂಭಗೊಂಡಿರುವುದರಿಂದ ಭಾರಿ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಿದ್ದಾರೆ. ಪ್ರತಿದಿನ ವಿದೇಶಿ ಚಾರ್ಟರ್ ವಿಮಾನಗಳು ಗೋವಾಕ್ಕೆ ಆಗಮಿಸುತ್ತಿವೆ.
ಸದ್ಯ ಗೋವಾದಲ್ಲಿ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೇ ಕಂಡುಬರುತ್ತಿದ್ದಾರೆ. ಇನ್ನು ಡಿಸೆಂಬರ್ ಆರಂಭಗೊಂಡರೆ ಹೊಸ ವರ್ಷ ಸಂಭ್ರಮಾಚರಣೆ ಹಾಗೂ ಕ್ರಿಸ್ಮಸ್ ಹಬ್ಬಕ್ಕೂ ಕೂಡ ಗೋವಾಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.
_______
With the tourist season beginning in the world-famous tourist destination of Goa, a large number of domestic and international tourists are arriving in the state every day. Due to this heavy influx of visitors, severe traffic jams are currently being witnessed on all major roads across Goa.
The state of Goa is not limited to just beautiful beaches; its ancient temples have also contributed to a surge in religious tourism. Tourists are arriving in large numbers to visit the historic temples located across various parts of the state.
Dozens of beaches in Goa serve as major attractions for visitors, alongside boating in the rivers and seas. Furthermore, Goa’s famous waterfalls are also beckoning tourists.
Since the current tourist season officially commenced on October 1, foreign tourists have been arriving in large numbers, with international charter flights landing in Goa daily.
Currently, crowds of tourists can be seen everywhere across the state. Once December begins, an even larger influx of visitors is expected in Goa for the upcoming Christmas and New Year celebrations.
