ಸುದ್ದಿ ಕನ್ನಡ ವಾರ್ತೆ
ಪೂಜೆ ಮಾಡಿ ದುಡ್ಡು ಡಬಲ್ ಮಾಡುವುದಾದರೆ ಯಾರಿಗೆ ಬೇಡ ಹೇಳಿ… ಅದರಲ್ಲೂ ಈ ಕಾಲದಲ್ಲಂತೂ ಹಣ ಡಬಲ್ ಮಾಡಿ ಕೊಡುವ ಜನರಿಗೇನೂ ಕೊರತೆ ಇಲ್ಲ. ಇಂಥವರಿಗೆ ಯಾಮಾರಿದರೆ ಕಥೆ ಮುಗಿತು ಅಷ್ಟೇ.
ಹೀಗೆ ಹಣವನ್ನು ಡಬಲ್ ಮಾಡುವುದಾಗಿ ಆಮೀಷ ಒಡ್ಡಿ 22 ಲಕ್ಷ ವಂಚಿಸಿದ ಪ್ರಕರಣ ಗೋವಾದ ಪೊಂಡಾ ದಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುರ್ಗಾಮಾತಾ ಅಲಿಯಾಸ್ ರೂಪಾಲಿ ಪವಾರ್ ಎಂಬ ಕೊಲ್ಲಾಪುರ ಮೂಲದ ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಬಂದಿತ ಆರೋಪಿ ಮಹಿಳೆಯು ಕಳೆದ ಆಗಸ್ಟ್ ತಿಂಗಳಿನಲ್ಲಿ ಗೋವಾದ ಪೊಂಡಾ ದಲ್ಲಿ ಒಂದು ದಂಪತಿಗಳಿಗೆ ನಿಮ್ಮ ಹಣ ಪೂಜೆ ಮಾಡಿ ಡಬಲ್ ಮಾಡಿ ಕೊಡುವುದಾಗಿ ಆಮೀಷ ಒಡ್ಡಿದಳು. ಇದನ್ನೇ ಸತ್ಯ ಎಂದು ನಂಬಿಕೊಂಡ ದಂಪತಿಗಳು ದೇವಸ್ಥಾನದಲ್ಲಿ ಆರೋಪಿ ಮಹಿಳೆ ಹೇಳಿದಂತೆ 22 ಲಕ್ಷ ರೂಗಳನ್ನು ತಂದು ಪೂಜೆಗೆ ಇಟ್ಟರು. ಪೂಜೆ ಮುಗಿದ ನಂತರ ನಿಮ್ಮ 22 ಲಕ್ಷ 44ರ ರೂಪಾಯಿ ಆಗಲಿದೆ ಎಂದು ಆ ಮಹಿಳೆ ದಂಪತಿಗಳಿಗೆ ಆಮಿಷ ವೊಡ್ಡಿದ್ದಳು.
ದುಡ್ಡು ಡಬಲ್ ಮಾಡುವ ಪೂಜೆ ಮುಗಿಯುತ್ತಿದ್ದಂತೆ ದಂಪತಿಗಳಿಗೆ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಲು ಈ ಮಹಿಳೆ ಹೇಳಿದಳು. ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲು ದಂಪತಿಗಳು ತೆರಳಿದಾಗ ಪ್ರದಕ್ಷಿಣೆ ಮುಗಿಸಿ ಬರುವಷ್ಟರಲ್ಲಿ ಈ ಮಹಿಳೆಯು ಪೂಜೆಗೆ ಇಟ್ಟಿದ್ದ 22 ಲಕ್ಷ ರೂಪಾಯಿಗಳನ್ನು ಚೀಲದಲ್ಲಿ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಳು.
ದಂಪತಿಗಳು ಪೂಜಾ ಸ್ಥಳದಲ್ಲಿ ತಾವು ಇಟ್ಟಿದ್ದ ಹಣ ಇರಲಿಲ್ಲ….
ಬದಲಾಗಿ ಅವರಿಗೆ ಅಲ್ಲಿ ಕೇವಲ ಪೂಜೆಗೆ ಬಳಸಿದ ಹೂ ಮಾತ್ರ ಸಿಕ್ಕಿತ್ತು. ದಿಕ್ಕು ತೋಚದಂತಾದ ದಂಪತಿಗಳು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
ಪೊಲೀಸರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಸದರಿ ಮಹಿಳೆಗಾಗಿ ಶೋಧ ಕಾರ್ಯ ಕೈಗೊತ್ತಿಕೊಂಡಿದ್ದರು. ಸತತ ಕಾರ್ಯಾಚರಣೆ ನಂತರ ಆರೋಪಿ ಮಹಿಳೆಯನ್ನು ಕೊಲ್ಲಾಪುರದಲ್ಲಿ ಗೋವಾ ಪೊಲೀಸರು ಬಂಧಿಸಿ ಗೋವಾಕ್ಕೆ ಕರೆ ತಂದಿದ್ದಾರೆ.
ಇಂತಹ ಕಾಲದಲ್ಲಿಯೂ ಮೂಡ ಆಚರಣೆ ಹೆಸರಲ್ಲಿ ಹಣ ದೋಚುವವರನ್ನು ನಂಬುವವರು ಇದ್ದಾರೆ ಎಂದರೆ ಅವರಿಗೆ ಏನೆನ್ನಬೇಕು…..?
_____
Suddi Kannada News
Who wouldn’t want their money doubled just by performing a special ritual (pooja)? Especially in this day and age, there is no shortage of fraudsters claiming they can double your cash. If you fall for their tricks, you are finished.
In a similar incident, a case of fraud involving ₹22 lakh—lured under the pretext of doubling money—has come to light in Ponda, Goa.
In connection with the case, the Goa Police have arrested a Kolhapur-based woman identified as Durgamata, alias Rupali Pawar.
Last August, the accused approached a couple in Ponda, Goa, promising to double their money through a special ritual. Believing her words, the couple followed her instructions, brought ₹22 lakh to a temple, and placed it for the pooja. The woman had lured them with the promise that their ₹22 lakh would turn into ₹44 lakh once the ritual was completed.
As soon as the money-doubling ritual concluded, the accused instructed the couple to perform pradakshina (circumambulate) around the temple. While the couple went around the temple, the woman packed the ₹22 lakh into a bag and fled the scene before they returned.
When the couple came back to the spot, their cash was gone—all that remained were the flowers used for the ritual. Left completely helpless and shocked, the couple immediately rushed to the local police station and lodged a complaint.
Following the complaint, the police registered a case and launched a manhunt for the accused. After a sustained operation, the Goa Police successfully tracked down and arrested the woman in Kolhapur, bringing her back to Goa.
What can one even say about people who still fall prey to con artists looting money in the name of superstition in this modern era?
