ಸುದ್ದಿ ಕನ್ನಡ ವಾರ್ತೆ
ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ನವೆಂಬರ್ 16ರ ಸಂಜೆ ವೇಳೆಗೆ ಇದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಂಡಮಾರುತಕ್ಕೆ ಅಕ್ವಾನ್ ಎಂದು ಹೆಸರಿಡಲಾಗಿದೆ.

ಅಕ್ವಾನ್ ಚಂಡಮಾರುತದ ಪರಿಣಾಮದಿಂದ ಬಂಗಾಳಕೊಲ್ಲಿ ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಭಾರಿ ಗಾಡಿಯ ಜೊತೆಗೆ ಸಮುದ್ರದಲ್ಲಿ ಆಳೆತರದ ಅಲೆಗಳು ಹೇಳುವ ಸಾಧ್ಯತೆ ಇದೆ ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಚಂಡಮಾರುತದ ಪರಿಣಾಮದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರಿತ್ಯ ಉಂಟಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಪ್ರತಿ ಗಂಟೆಗೆ 80 ಕಿಲೋಮೀಟರ್ ವರೆಗೆ ಭಾರಿ ವೇಗದ ಗಾಳಿ ಬೀಸಬಹುದು. ಮುಂದಿನ ಎರಡು ದಿನಗಳವರೆಗೆ ಈ ಚಂಡಮಾರುತದ ಪರಿಣಾಮ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕಳೆದ ಕೆಲ ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಚಂಡಮಾರುತಗಳ ಪೈಕಿ ಮೂರನೇ ಚಂಡಮಾರುತ ಇದಾಗಿದೆ. ಕಳೆದ ಕೆಲ ದಿನಗಳ ಹಿಂದೆ ಅರ್ನಬ್ ಚಂಡಮಾರುತ, ಮುರಸು ಚಂಡಮಾರುತ, ಹೆಚ್ಚಿನ ತೊಂದರೆ ಉಂಟು ಮಾಡಿದ್ದು. ಇದೀಗ ಬಂಗಾಳಕೊಂದಿಯಲ್ಲಿ ಮತ್ತೊಂದು ಚಂಡಮಾರುತ ರೂಪಗೊಂಡಿದ್ದು ಇದರ ತೀವ್ರತೆಯ ಮೇಲೆ ಹವಾಮಾನ ಇಲಾಖೆ ತೀವ್ರನಿಗಾ ಇಟ್ಟಿದೆ.