ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜಧಾನಿ ಪಣಜಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ದೇಶ ವಿದೇಶೀಯ ಪ್ರವಾಸಿಗರು ಗೋವಾಕ್ಕೆ ಆಗಮಿಸಿದ್ದಾರೆ. ಚಲನಚಿತ್ರ ಕ್ಷೇತ್ರದ ದಿಗ್ಗಜರು ಕೂಡ ಗೋವಾಕ್ಕೆ ಆಗಮಿಸಿದ್ದಾರೆ. ಪ್ರಸಕ್ತ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಒಂದು ಶಿಬಿರವನ್ನು ಆಯೋಜಿಸಲಾಗಿತ್ತು. ಕ್ರಿಯೆಟಿವ್ ಮೈಂಡ್ಸ ಆಫ್ ಟುಮಾರೊ ಈ ಕಾರ್ಯಕ್ರಮದ ಅಡಿಯಲ್ಲಿ ಹೊಸ ಚಲನಚಿತ್ರ ನಿರ್ಮಾಪಕರಿಗೆ ತರಿಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಇದರಡಿಯಲ್ಲಿ 48 ಗಂಟೆಯಲ್ಲಿ 5 ರಿಂದ 6 ನಿಮಿಷದ ಚಲನಚಿತ್ರ ನಿರ್ಮಿಸಬೇಜಕಿತ್ತು, ಇದರಲ್ಲಿ 100 ಕ್ಕೂ ಹೆಚ್ಚು ಸ್ಫರ್ಧಾಳುಗಳು ಪಾಲ್ಗೊಂಡಿದ್ದರು.
ಕ್ರಿಯೆಟಿವ್ಸ ಮೈಂಡ್ಸ ಆಫ್ ಟುಮಾರೊ ಈ ಸ್ಫರ್ಧೆಯನ್ನು ಮಾಹಿತಿ ಮತ್ತು ಪ್ರಸರಣ ಮಂತ್ರಾಲಯ , ನ್ಯಾಶನಲ್ ಫಿಲ್ಮ ಡೆವಲಪ್ ಮೆಂಟ್ ಕಾರ್ಪೊರೇಶನ್ ಹಾಗೂ ಶಾಟ್ರ್ಸ ಟಿವಿ ಈ ಸ್ಫರ್ಧೆಯನ್ನು ಆಯೋಜಿಸಿತ್ತು.
ಈ ಸ್ಫರ್ಧೆಯಲ್ಲಿ ನೆಕ್ಸ್ಟ ಜನರೇಶನ್ ಎಐ ಎಂಬ ವಿಷಯದ ಮೇಲೆ ಶಾರ್ಟ ಫಿಲ್ಮ ಸಿದ್ಧಪಡಿಸಲು ಟಾಸ್ಕ ನೀಡಲಾಗಿತ್ತು.