ಸುದ್ದಿ ಕನ್ನಡ ವಾರ್ತೆ
ಗೋವಾ: ಗೋವಾದ ಮಾಪುಸಾ ಪಟ್ಟಣದಲ್ಲಿ ಬಲೂನ್ ಮಾರಾಟ ಮಾಡುವ ವ್ಯಕ್ತಿಯ ಎರಡು ವರ್ಷದ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದು ಇದು ಲೈಂಗಿಕ ದೌರ್ಜನ್ಯ  ಎಸಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬಲೂನ್ ಮಾರಾಟದಲ್ಲಿ ತೊಡಗಿರುವ ಕುಟುಂಬದ ಎರಡು ವರ್ಷದ ಬಾಲಕಿಯನ್ನು ದೀಪಾವಳಿ ಹಬ್ಬದಂದು ಸಂಜೆ ಮಾಪುಸಾ ಪಟ್ಟಣದ ಲೋಹಿಯಾ ಗಾರ್ಡನ್ ಬಳಿಯ ಶಿಖಿಲಗೊಂಡ ಕಟ್ಟಡಕ್ಕೆ ಕರೆದು ಇದು ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಈ ಪುಟ್ಟ ಬಾಲಕಿಯು ಈ ಪಾಳು ಬಿದ್ದ ಕಟ್ಟದ ಕಟ್ಟಡದ ಹೊರಗೆ ಬಟ್ಟೆ ಇಲ್ಲದೆ ಅಳುತ್ತಾ ನಿಂತಿರುವ ದೃಶ್ಯ ಕಂಡು ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಗುವನ್ನು ಮೊದಲು ಮಾಪುಸ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜು ಜಿಎಂಸಿಗೆ ಕರೆದೊಯ್ಯಲಾಗಿದೆ. ಈ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಉತ್ತರ ಗೋವಾ ಎಸ್ಪಿ ರಾಹುಲ್ ಗುಪ್ತ ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಕ ಕಾರ್ಯ ಕೈಗೊತ್ತಿಕೊಂಡಿದ್ದಾರೆ.