ಸುದ್ದಿ ಕನ್ನಡ ವಾರ್ತೆ
ಶಿರಸಿ: ಬೇಡ್ತಿ _ವರದಾ ನದಿ ಜೋಡಣೆಯಿಂದ ಉಂಟಾಗುವ ಸಾಧಕ ಬಾಧಕಗಳು ಕುರಿತು ಸಮಗ್ರ ಚರ್ಚೆ ನಡೆಯಬೇಕು. ಬಳಿಕವೇ ಈ ಯೋಜನೆಯ ಅನುಷ್ಠಾನದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು-ಬೇಡ್ತಿ ವರದಾ ನದಿ ಜೋಡಣೆಯಿಂದ ಒಂದು ಭಾಗಕ್ಕೆ ಉಂಟಾಗುವ ನಷ್ಟ ಇನ್ನೊಂದು ಭಾಗಕ್ಕೆ ಉಂಟಾಗುವ ಲಾಭ ಇವೆರಡನ್ನು ಸಮತೋಲನ ರೀತಿಯಲ್ಲಿ ಪರಿಗಣಿಸುವ ಅಗತ್ಯವಿದೆ. ಇದರಿಂದಾಗಿ ಒಂದು ಯೋಜನೆಯನ್ನು ಜಾರಿಗೊಳಿಸುವಾಗ ಅದರ ಲಾಭದ ದೃಷ್ಟಿಯಿಂದ ಅಥವಾ ನಷ್ಟ ದೃಷ್ಟಿಯಿಂದ ನೋಡಬಾರದು. ಎರಡು ಆಯಾಮಗಳನ್ನು ಪರಿಶೀಲಿಸಬೇಕು ಎಂದರು.

ಈ ಯೋಜನೆಯಿಂದಾಗಿ ಬೇಡ್ತಿ ನದಿ ಪ್ರದೇಶದ ಪರಿಸರ ಹಾಗೂ ಜೀವ ವೈವಿಧ್ಯ ಹಾಗೂ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು. ಈ ಯೋಜನೆಯ ಜಾರಿಯಿಂದ ಸ್ಥಳೀಯ ಜನರ ಮೇಲೆ ಉಂಟಾಗುವ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎಂದು ಲಕ್ಷ್ಮಣ್ ಸವದಿ ನುಡಿದರು.