ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ-ವರದಾ ಮತ್ತು ಅಘನಾಶಿನಿ ನದಿ ಜೋಡಣೆಯನ್ನು ಕೈಬಿಡುವಂತೆ ಆಘ್ರಹಿಸಿ ನವೆಂಬರ್ 3 ರಂದು ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಉತ್ತರಕನ್ನಡ ಜಿಲ್ಲೆಯ ವಿವಿದೆಡೆಯಿಂದ ಹೆಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯದ್ದು ಈ ಹೋರಾಟಕ್ಕೆ ಆಗಮಿಸುವವರಿಗ ರಸ್ತೆ ತಡೆ ಸಂಚಾಲನಾ ಸಮಮೀತಿ ಯಲ್ಲಾಪುರ ಕೆಲ ಸೂಚನೆಗಳನ್ನು ನೀಡಿದೆ.

ಸಮಯ:-ಬೆಳಿಗ್ಗೆ 9.30 ರ ಒಳಗಾಗಿ ಖಡ್ಡಾಯವಾಗಿ ಎಲ್ಲರೂ ಸ್ಥಳಕ್ಕೆ ಬಂದು ತಲುಪಬೇಕು.

ವಾಹನ ನಿಲುಗಡೆ;-(ಶಿರಸಿ ಭಾಗದಿಂದ ಬರುವವರಿಗೆ)…
ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಯಲ್ಲಾಪುರ ಎಪಿಎಂಸಿ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಎಲ್ಲರೂ ವ್ಯವಸ್ಥಿತ ಪಾರ್ಕಿಂಗ್ ಮಾಡಬೇಕು. (ಅಲ್ಲಿಂದ ಸಭಾಂಗಣ ಕೇವಲ 200 ಮೀಟರ್ ದೂರ)

ಗಮನಿಸಿ:-ಯಲ್ಲಾಪುರ ಪಟ್ಟಣ ಸಂಪೂರ್ಣ ಬಂದ್…!
ನವೆಂಬರ್ 3 ರಂದು ಪಟ್ಟಣ ಸಂಪೂರ್ಣ ಬಂದ್ ಇರುವುದರಿಂದ ಬೆಳಗಿನ ಉಪಹಾರಕ್ಕೆ ಯಾವುದೇ ಹೋಟೆಲ್ ಗಳು ತೆರೆದಿರುವುದಿಲ್ಲ.

ಕಾರ್ಯಕ್ರಮಗಳ ವಿವರ;-ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಟಿಎಂಎಸ್ ಸುಪರ್ ಮಾರ್ಕೇಟ್ ಮೈದಾನದಲ್ಲಿ ಬೃಹತ್ ಸಭೆ
ಬಳಿಗ್ಗೆ 11 ಗಂಟೆಗೆ ಟಿಎಂಎಸ್ ಮೈದಾನದಿಂದ ಮೆರವಣಿಗೆ ಪ್ರಾರಂಭ, ಬಸ್ ನಿಲ್ದಾಣವೃತ್ತ-ಬೆಲ್ ರಸ್ತೆ- 400 ಮೀಟರ್ ವರೆಗೆ ಸಾಗುವುದು. ಮೆರವಣಿಗೆಯಲ್ಲಿ ಭಜನೆ, ಗೀಗಿಪದ, ಪರಿಸರ ಗೀತೆ ಮತ್ತು ಆಕರ್ಷಕ ಸ್ಥಬ್ದಚಿತ್ರ ಇರಲಿದೆ.

ರಾಷ್ಟ್ರೀಯ ಹೆದ್ದಾರಿ ರಸ್ತೆತಡೆ:- ಶಿವಾಜಿ ಚೌಕ/ಸಬಗೇರಿ ವೃತ್ತ/ಸಂಕಲ್ಪ ಹೋಟಲ್ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಯಲಿದೆ.

ಕುಡಿಯುವ ನೀರು-ಊಟದ ವ್ಯವಸ್ಥೆ:- ರಸ್ತೆ ತಡೆ ಸ್ಥಳದಲ್ಲಿ ಕುಡಿಯುವ ನೀರು, 3-4 ಕಡೆ ತಂಪುಪಾನೀಯ ವ್ಯವಸ್ಥೆ ಇರುತ್ತದೆ.
ಮಧ್ಯಾನ್ಹದ ಊಟ-ರಸ್ತೆ ತಡೆ ಸ್ಥಳದ ಪಕ್ಕದ ಮೈದಾನದಲ್ಲಿ ಮಧ್ಯಾನ್ಹ 1.30 ರಿಂದ ಊಟದ ವ್ಯವಸ್ಥೆ ಇರಲಿದೆ.

ಸಾರ್ವಜನಿಕರಲ್ಲಿ ವಿನಂತಿ:-ನಿಮ್ಮ ಕುಡಿಯುವ ನೀರಿನ ಬಾಟಲಿ
ನಿತ್ಯ ಬಳಸುವ ಔಷಧ/ಮಾತ್ರೆಗಳು, ಓಆರ್ ಎಸ್ ಪ್ಯಾಕೇಟ್, ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ಹೋರಾಟಕ್ಕೆ ಆಗಮಿಸುವವರ ನೆರವಿಗೆ ಪ್ರತಿಯೊಂದು ಜಾಗದಲ್ಲಿಯೂ ಬ್ಯಾಡ್ಜ ಧರಿಸಿದ ಪ್ರಬಂಧಕರು ಇರಲಿದ್ದಾರೆ. ಈ ಹೋರಾಟದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ನಮ್ಮ ಹೋರಾಟ ಶಾಂತಿಯುತವಾಗಿ ನಡೆಸೋಣ ಎಂದು ರಸ್ತೆ ತಡೆ ಸಂಚಾಲನಾ ಸಮಮೀತಿ ಯಲ್ಲಾಪುರ ಕೆಲ ಸೂಚನೆಗಳನ್ನು ನೀಡಿದೆ.