ಸುದ್ದಿ ಕನ್ನಡ ವಾರ್ತೆ
ರಾಮನಗರ:ಅಕ್ಟೊಬರ ಗುರುವಾರ ಅಂಜುಮಾನ ಕಲಾ , ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಭಟ್ಕಳ ಇವರ ಸಹಯೋಗದಲ್ಲಿ ಧಾರವಾಡದಲ್ಲಿ ನಡೆದ 2026-27ನೇ ಸಾಲಿನ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಅಂತರ ಮಹಾವಿದ್ಯಾಲಯದ ಈಜು ಕ್ರೀಡಾ ಸ್ಪರ್ಧೆಯಲ್ಲಿ ರಾಮನಗರದ . ಬಿ.ಜಿ.ವಿ. ಎಸ್ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ದ ಕ್ರೀಡಾಪಟು ಓಂ ವೆಂಕಟೇಶ್ ಜವಳಿ ಈತನು
200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಬಂಗಾರದ ಪದಕ.
100 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಬೆಳ್ಳಿಯ ಪದಕ.
50 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಬೆಳ್ಳಿಯ ಪದಕ..ಮತ್ತು 100 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಬೆಳ್ಳಿಯ ಪದಕ.
ಒಟ್ಟು 1 ಬಂಗಾರದ ಪದಕ ಮತ್ತು 3 ಬೆಳ್ಳಿಯ ಪದಕ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ ಈತನ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಉಲ್ಲಾಸ ನಾಯ್ಕ ಉಪಾಧ್ಯಕ್ಷರು , ಮಂಜುನಾಥ ಪವಾರ ಕಾರ್ಯದರ್ಶಿ , ಕಿಶೋರ ರಾಣೆ ಜಂಟಿ ಕಾರ್ಯದರ್ಶಿ. ಗಜೇಂದ್ರ ಗಾಂದಲೆ ಅಧ್ಯಕ್ಷರು ಸ್ಥಳೀಯ ಆಡಳಿತ ಸಮಿತಿ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಅನಿಲ್ ಕುಮಾರ ದೇವರಸಿ, ದೈಹಿಕ ಶಿಕ್ಷಣ ನಿರ್ದೇಶಕ ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳುವಿದ್ಯಾರ್ಥಿಗಳು ಓಂ ಜವಳಿಗೆ ಶುಭ ಹಾರೈಸಿರುತ್ತಾರೆ.
