ಸುದ್ದಿ ಕನ್ನಡ ವಾರ್ತೆ
​ಹೊನ್ನಾವರ:ತಾಲೂಕಿನ ಆಡುಕಳದವರಾದ ಸ್ವರಶ್ರೀ ಗುರುರಾಜ ಹೆಗಡೆ ಇವರು ಕೇವಲ ಎರಡು ವರ್ಷ ಹತ್ತು ತಿಂಗಳ ವಯಸ್ಸಿನಲ್ಲಿ ತಬಲಾದಲ್ಲಿನ ಪ್ರಮುಖ 12 ತಾಳಗಳನ್ನು ಬಾಯಲ್ಲಿ ಉಚ್ಚರಿಸುತ್ತಾ ತಬಲಾದಲ್ಲಿ ಆ ತಾಳಗಳನ್ನು ಸೊಗಸಾಗಿ ನುಡಿಸುವ ಮೂಲಕವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆಯುವ ಮೂಲಕ ಕಿರಿಯ ವಯಸ್ಸಿನಲ್ಲೇ ಗಣನೀಯ ಸಾಧನೆ ಮಾಡಿದ್ದಾರೆ.

​ಹೊನ್ನಾವರದಲ್ಲಿ ಕಳೆದ ಆರೇಳು ವರ್ಷಗಳಿಂದ ಸ್ವರಶ್ರೀ ಸಂಗೀತ ಶಾಲೆ ತೆರೆದು ನೂರಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಎರೆಯುತ್ತಿರುವ ತಬಲಾಪಟುಗುರುರಾಜ ಹೆಗಡೆ ಅಡುಕಳ ಹಾಗೂ ಗಾಯಕಿ ಶ್ರೀಲತಾ ಗುರುರಾಜ ಅವರ ಮಗಳಾಗಿರುವ ಇವಳಿಗೆ ಎಳೆವಯಸ್ಸಿಂದಲೇ ಸಂಗೀತದ ಬಗ್ಗೆ ಅಪಾರ ತುಡಿತವಿತ್ತು. ತಮ್ಮ ಪಾಲಕರ ನೆರವಿನಿಂದ ಸ್ವರಶ್ರೀ ಈ ಸಾಧನೆ ಮಾಡಿದ್ದು ಈಗ ಇವಳು ಲಯಶ್ರೀಯಾಗಿಯೂ ನಾಡಿನ ಗಮನ ಸೆಳೆದಿದ್ದಾಳೆ.

​ಇವಳ ಈ ಸಾಧನೆಗೆ ಕೆ. ರಮೇಶ್ ರಾವ್, ಶೋಭಾ ಹೆಗಡೆ, ಸುರೇಶ್ ಹೆಗಡೆ, ಲೀಲಾ ಹೆಗಡೆ ಮೊದಲಾದವರು ಅಭಿನಂದಿಸಿದ್ದಾರೆ.

Banner Ad