Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಯರಮುಖ ದ ಬಯಲು ರಂಗ ಮಂದಿರದಲ್ಲಿ ಇದೇ ಬರುವ ದಿನಾಂಕ 22 ರಿಂದ 28 ರ ವರೆಗೆ ಸಪ್ತ ಸ್ವರ ಸೇವಾ ಸಂಸ್ಥೆಯವರು,ಗಡಿ ನಾಡಲ್ಲೊಂದು ಯಕ್ಷಗಾನ ಸಪ್ತಾಹ ವನ್ನು ಕಲಾಭಿಮಾನಿಗಳ ಸಹಯೋಗದಲ್ಲಿ ನಡೆಸುತ್ತಿದ್ದಾರೆ.

Banner Ad

 

ಈ ಸಪ್ತಾಹಕ್ಕೆದಿನಾಂಕ 22ರಂದು ಯರಮುಖ ಶ್ರೀ ಸೋಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಹಿರಿಯರಾದ ಶಂಕರ ಆಳ್ಕೆ ಅವರು ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡುವರು.ಪ್ರತಿ ದಿನವೂ ಗಣ್ಯರ ಉಪಸ್ಥಿತಿ,ಯಲ್ಲಿ ಅಂದಿನ ಕಾರ್ಯಕ್ರಮ ದ ದೀಪ ಜ್ಯೋತಿ ಬೆಳಗಿಸಲಾಗುತ್ತದೆ. ದಿನಾಂಕ 22ರಂದು ಮೀನಾಕ್ಷಿ ಕಲ್ಯಾಣ, ದಿನಾಂಕ 23ರಂದು ಶರಸೆತು ಬಂಧನ, ದಿನಾಂಕ 24ರಂದು ಶ್ರೀ ಕೃಷ್ಣ ಪಾರಿಜಾತ, ದಿನಾಂಕ 25ರಂದು ದೇವಿ ಮಹಾತ್ಮೆ, ದಿನಾಂಕ 26ರಂದು ಲಂಕಾ ಧಹನ, ದಿನಾಂಕ 27ರಂದು, ವೀರ ವೃಷ ಸೇನ ದಿನಾಂಕ 28ರಂದು ಕನಕಾಂಗಿ ಕಲ್ಯಾಣ,ಸೀಮಿತ ಅವಧಿಯ ಯಕ್ಷಗಾನ, ನಡೆಯಲಿದೆ.

 

ಅಂಕೋಲಾ ದ ಆನಂದ ಆಗೇರ ಅವರ ಸಾರತ್ಯ ದ ಉತ್ತಮ ಹಿಮ್ಮೆಳ ಇದ್ದು, ಕಾರ್ಯಕ್ರಮ ದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ತಿಮ್ಮಪ್ಪ ದೇಸಾಯಿ ತಿಳಿಸಿರುತ್ತಾರೆ. ಕಾರ್ಯಕ್ರಮ ದ ನಂತರ ಪ್ರತಿದಿನವೂ ಪ್ರೇಕ್ಷಕ ರಿಗೆ ಊಟ ದ ವ್ಯವಸ್ಥೆ ಮಾಡಲಾಗಿದೆ.

Banner Ad