ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಗ್ಗಾರ್ ಶ್ರೀಮತಿ ನಾಗರತ್ನ ಮತ್ತು ಶ್ರೀರಾಮಕೃಷ್ಣ ಭಟ್ ಕೋನಾಳ ಇವರ ಪುತ್ರ ಮಹೇಶ ಹಾಗೂ ಶ್ರೀಮತಿ ಸ್ಮಿತಾ ಮತ್ತು ಶ್ರೀ ಶಂಕರ್ ದುಂಡಿ ಹೂವಿನ ಮನೆ ದೇಹಳ್ಳಿ ಯಲ್ಲಾಪುರ ಇವರ ಪುತ್ರಿ ಅಕ್ಷತಾ ರವರ ವಿವಾಹವು ಭಾನುವಾರ ಹೆಗ್ಗಾರ್ ಸ್ವಗೃಹದಲ್ಲಿ ಅದ್ದೂರಿಯಾಗಿ ಜರುಗಿತು.
ಇವರ ವಿವಾಹ ಸಮಾರಂಭಕ್ಕೆ ಸಾವಿರಾರು ಜನ ಸಂಬಂಧಿಕರು ಆಗಮಿಸಿದ್ದರು.
ಭಾನುವಾರ ಸಂಜೆ ವಧುಪ್ರವೇಶ ಕಾರ್ಯ ಕೂಡ ಜರುಗಿತು.
ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ನೂತನ ವಧು ವರರಿಗೆ ಸುದ್ದಿ ಕನ್ನಡ ಬಳಗ ಶುಭ ಕೋರಿದೆ.