Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಅತಿಕ್ರಮಣ ಜಮೀನುಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಸಂಬಂಧಿಸಿದಂತೆ ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ, ಈ ವಿಷಯದಲ್ಲಿ ಜನರ ಪರವಾಗಿ ಧ್ವನಿ ಎತ್ತಿದ ಎಲ್ಲ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಭಾರತೀಯ ಜನತಾ ಪಾರ್ಟಿ – ಜೋಯಿಡಾ ಮಂಡಲದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

Banner Ad

ನಮ್ಮ ನೆಚ್ಚಿನ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರ್ದೇಶನದಂತೆ, ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಮಂಡಲ ಅಧ್ಯಕ್ಷರಾದ ಶಿವಾಜಿ ಗೋಸಾವಿ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪಕ್ಷದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜೋಯಿಡಾ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು
ಈ ಹೋರಾಟದ ಜೋಯಿಡಾ ತಾಲ್ಲೂಕಿನ 16 ಗ್ರಾಮ ಪಂಚಾಯತ್ ಭಾಗವಾಗಿ ರಾಮನಗರ ಜೋಯಿಡಾ ಕುಂಬಾರವಾಡ ಅಣಸಿ, ಅಸು, ಜಗಲ್ ಬೆಟ್, ಕೆಸಲ್ರಾಕ್, ಬಜಾರ್ ಕೋಣಂಗ, ಅವೆಡಾ,ಗಾಂಗೋಡ,ಗುಂದ,ಅಕೇತಿ,ನಾಗೋಡ,ಉಳವಿ ಸಿಂಗರ್ ಗಾವ್ ಹಾಗೂ ಪ್ರಧಾನಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ, ಜನರ ಸಮಸ್ಯೆಯ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದರು,ಈ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಇದು ತಾತ್ಕಾಲಿಕ ತಡೆಯ ಮೊದಲ ಜಯವಾಗಿದ್ದು ಇದನ್ನು ಪೂರ್ತಿಯಾಗಿ ಬಿಡುವವರೆಗೂ ನಮ್ಮ ಹೂರಾಟ ಮುಂದುವರೆಯಲಿದೆ.
ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ; ತಮ್ಮ ಮನೆಗಳ ಹಕ್ಕು ಮತ್ತು ಜನರ ಸಮಸ್ಯೆಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಿದ ಸಾರ್ವಜನಿಕರ ಹೋರಾಟವಾಗಿದೆ. ಆದೇಶಕ್ಕೆ ತಾತ್ಕಾಲಿಕ ತಡೆ ದೊರೆತಿರುವುದು ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ದೊರೆತ ಮಹತ್ವದ ಮುನ್ನಡೆಯಾಗಿದೆ. ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ.

ಪಕ್ಷದ ಕಾರ್ಯಕರ್ತ ಬಂಧುಗಳಲ್ಲಿ ಮನವಿಏನೆಂದರೆ ಸಾರ್ವಜನಿಕರಿಗೆ ಅನ್ಯಾಯವಾದಾಗ ಅವರ ಪರವಾಗಿ ಮೊದಲು ಧ್ವನಿ ಎತ್ತುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂದಿನ ದಿನಗಳಲ್ಲಿಯೂ ನಾವು ಮತ್ತಷ್ಟು ಕ್ರಿಯಾಶೀಲರಾಗಿ, ಜನರ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸೋಣ.
ಜನರ ಹಕ್ಕುಗಳ ರಕ್ಷಣೆಯೇ ನಮ್ಮ ಸಂಕಲ್ಪ. ಜನಸೇವೆಯೇ ನಮ್ಮ ಗುರಿ.
ಜೈ ಹಿಂದ್! ಭಾರತ ಮಾತಾ ಕೀ ಜೈ!ಎಂದು
ಭಾರತೀಯ ಜನತಾ ಪಾರ್ಟಿ – ಜೋಯಿಡಾ ಮಂಡಲ*ಪ್ರಕಟಣೆ ನೀಡಿದೆ.

Banner Ad