Banner Ad

ಸುದ್ದಿ ಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಗುರುವಾರ ನಿಧನರಾದ ಬಾಲಿವುಡ್ ಖ್ಯಾತಿಯ ಹಿರಿಯ ನಟ ನಾನಾ ಪಾಟೇಕರ್ ರವರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಗೋವಾದಿಂದ ಪುಣೆಗೆ ಕರೆದೊಯ್ಯಲಾಯಿತು.

ಮರಣೋತ್ತರ ಪರೀಕ್ಷೆಯ ನಂತರ ಗೋವಾ ವೈದ್ಯಕೀಯ ಮಹಾವಿದ್ಯಾಲಯದ ಬಳಿಯಿಂದ ಅಂಬುಲೆನ್ಸ್ ಮೂಲಕ ಗೋವಾ ಮೊಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಏರ್ ಆಂಬುಲೆನ್ಸ್ ಮೂಲಕ ಪುಣೆಗೆ ಕರೆದೊಯ್ಯಲಾಯಿತು.

Banner Ad

ಈ ಸಂದರ್ಭದಲ್ಲಿ ನಾನಾ ಪಾಟೇಕರ್ ರವರ ಪುತ್ರ ಹಾಗೂ ಪತ್ನಿ ಉಪಸ್ಥಿತರಿದ್ದರು. ಗೋವಾ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಗಣ್ಯರಿಂದ ಅಂತಿಮ ನಮನ ಸಲ್ಲಿಸ ಲಾಯಿತು.

Banner Ad