ಸುದ್ಧಿಕನ್ನಡ ವಾರ್ತೆ
ಬೆಳಗಾವಿ: ಸಮೃದ್ಧ ಅಂಗವಿಕಲರ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಾಹರ್ಲಾಲ್ ನೆಹರುರವರ ಜಯಂತಿಯೊಂದಿಗೆ ಸಾಧನೆಗೈದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಂಸ್ಥೆಯವರು ಹಮ್ಮಿಕೊಂಡ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಾನಂದ ಸ್ವಾಮೀಜಿ ಬೇವಿನ ಕೊಪ್ಪ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮಾನ್ಯ ಶ್ರೀ ಬಸವನಗೌಡ ಪಾಟೀಲ್ ಜೈ ಭಾರತ್ ಫೌಂಡೇಶನ್ ಅಶೋಕ್ ಐರನ್ ಕಂಪನಿ ಬೆಳಗಾವಿ ಪ್ರಕಾಶ್ ಹೆಗ್ ನಾಯಕ ಸಿವಿಲ್ ಇಂಜಿನಿಯರ್ ಬೆಳಗಾವಿ, ಆಕಾಶ್ ಚಂದ್ರಶೇಖರ್ ಅಧ್ಯಕ್ಷರು ಆಸರೆ ಫೌಂಡೇಶನ್ ಬೆಳಗಾವಿ, ರೂಪಾಲಿ ಹೊಸಕೋಟಿ ಆಯುಷ್ಮಾನ್ ಫೌಂಡೇಶನ್ ಅಧ್ಯಕ್ಷರು ಬೆಳಗಾವಿ, ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.

ಅವರಲ್ಲಿ ವಿಶೇಷವಾಗಿ ಸರಿಗಮಪ ಸೀಸನ್ 20 ಖ್ಯಾತಿಯ ಗಾಯಕಿ ಸ್ವಾತಿ ಸುತಾರ್, ಅಂತರಾಷ್ಟ್ರೀಯ ಮಟ್ಟದ ಮಾಡೆಲ್ ಆಯುಷ್ ಹೊಸಕೋಟಿ, ಬಸಮ್ಮ ಮಠದ ಚಿನ್ನದ ಪದಕ ವಿಜೇತರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯ ಮೈಸೂರು ಮತ್ತು ಸಂಸ್ಥೆಯ ವಿಶೇಷ ಪ್ರತಿಭೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು

ಇವರೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ್, ಮತ್ತು ಕಾರ್ಯದರ್ಶಿ ಪ್ರಶಾಂತ್ ಪೋತದಾರ, ಸಂಸ್ಥೆಯ ಸದಸ್ಯರು, ವಿದ್ಯಾರ್ಥಿಗಳು ಹಾಗೂ ರಾಣಿ ಚೆನ್ನಮ್ಮ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಉಪಸ್ಥಿತರಿದ್ದರು.