ಸುದ್ದಿ ಕನ್ನಡ ವಾರ್ತೆ

ಮುದ್ದೇಬಿಹಾಳ: ತಾಲೂಕಿನ ಗರಸಂಗಿ ಕ್ರಾಸ್ ಹತ್ತಿರ ಕಬ್ಬನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಕಬ್ಬಿನ ರಾಶಿ ಸಮೇತ ಮೇಲೆ ಬಿದ್ದು ಹಿರೇಮುರಾಳ ಗ್ರಾಮದ ಸಂಗಮೇಶ ಚಲವಾದಿ (35) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ಸಂಗಮೇಶನು ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ತನ್ನ ಕೆಲಸ ಮುಗಿದ ನಂತರ ಬೈಕ್ ಮೇಲೆ ತನ್ನೂರಿಗೆ ಹೊರಟಿದ್ದ. ಎದುರಿಗೆ ಕಬ್ಬು ತುಂಬಿದ ಟ್ರಾö್ಯಕ್ಟರ್ ವೇಗವಾಗಿ ಬರುತ್ತಿರುವುದನ್ನು ಕಂಡು ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದ. ಆದರೆ ಆತನ ಹತ್ತಿರ ಬರುತ್ತಿದ್ದಂತೆಯೇ ಟ್ರಾö್ಯಕ್ಟರ್ ಎಂಜಿನ್ ಮುಂದಕ್ಕೆ ಚಲಿಸುವಾಗ ಹಿಂಭಾಗದ ಟ್ರಾö್ಯಲಿಗಳು ಕಬ್ಬು ಸಮೇತ ಆಯತಪ್ಪಿ ಆತನ ಮೇಲೆ ಬಿದ್ದಿವೆ. ಘಟನೆ ನಡೆದ ಕೂಡಲೇ ಇನ್ನೂ ಉಸಿರಾಡುತ್ತಿದ್ದ ಆತನನ್ನು ಹೊರಗೆ ತೆಗೆಯಲು ಸ್ಥಳೀಯರು ಜೆಸಿಬಿ ತರಿಸಲು ಯತ್ನಿಸಿದರೂ ಸಕಾಲಕ್ಕೆ ಜೆಸಿಬಿ ದೊರೆಯದ ಕಾರಣ ಆತ ತೀವ್ರ ನೋವಿನಿಂದ ಒದ್ದಾಡಿ ಸಾವನ್ನಪ್ಪಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಕಾರ್ಖಾನೆಗೆ ಕಬ್ಬು ಹೊತ್ತು ತರುವ ಟ್ರಾö್ಯಕ್ಟರುಗಳ ಚಾಲಕರು ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಟ್ರಾö್ಯಕ್ಟರ್ ಚಲಾಯಿಸಿಕೊಂಡು ಬರುತ್ತಾರೆ. ಇದನ್ನು ನಿಯಂತ್ರಿಸುವAತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದರೂ ಅವರು ನಿರ್ಲಕ್ಷö್ಯ ತೋರಿದ್ದು ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.