ಸುದ್ದಿ ಕನ್ನಡ ವಾರ್ತೆ
ಮಹಾಲಿಂಗಪುರ: ಪಟ್ಟಣದ ಆರಾಧ್ಯದೈವ ಮಹಾಲಿಂಗೇಶ್ವರರ ಮಹಾಜಾತ್ರೆಯ ನಿಮಿತ್ಯ ಇದೇ ಮೊದಲ ಬಾರಿಗೆ ಜರುಗಿದ ರೊಟ್ಟಿ ಬುತ್ತಿಯ ಮೇರವಣಿಗೆಯು ಅತ್ಯಂತ ಸಂಭ್ರಮದಿAದ ಜರುಗಿ, ಪ್ರಸಕ್ತ ವರ್ಷದ ಮಹಾಲಿಂಗೇಶ್ವರ ಮಹಾಜಾತ್ರೆಗೆ ಹೊಸ ಕಳೆಯನ್ನು ಮೂಡಿಸಿತು.


ಬುಧವಾರ ಪ್ರಥಮ ದಿನದ ರೊಟ್ಟಿ ಬುತ್ತಿಯ ಬೃಹತ್ ಮೆರವಣಿಗೆಯು ಪಟ್ಟಣ ಹೆಸ್ಕಾಂ ಗಣಪತಿ ದೇವಸ್ಥಾನದಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಅತ್ಯಂತ ವಿಜೃಂಭನೆಯಿAದ ಜರುಗಿತು.


ಪಟ್ಟಣದ ರೇವಡಿಗಿಡ, ಡಚ್ ಕಾಲೋನಿ, ಗಣೇಶ ನಗರ, ಬಾಲಾಜಿ ನಗರ, ಶಾಂತಿನಿಕೇತನ ಕಾಲನಿ, ಅಯೋಧ್ಯಾ ನಗರ, ಕೆಂಗೇರಿಮಡ್ಡಿ, ಬುದ್ನಿಪಿಡಿ, ಹ್ಯಾಗಾಡಿ ಪ್ಲಾಟ್, ಬುದ್ನಿ ವಿಠ್ಠಲ ರುಕ್ಮೀಣಿ ನಗರ, ಹುಲಕುಂದ ಓಣಿ, ಮಲ್ಲಯ್ಯನಗುಡಿ, ಬಡಿಗೇರ ಓಣಿ, ಹಟ್ಟಿ ಓಣಿ, ಮಿರ್ಜಿ ಓಣಿ, ಜವಳಿ ಬಜಾರ, ಯಲ್ಲಮ್ಮನಗುಡಿ, ನೀಲಕಂಠೇಶ್ವರ ಗುಡಿ, ಸಾಧುನ ಗುಡಿ, ಭಜಂತ್ರಿ ಓಣಿ, ಮರೆಗುದ್ದಿ ಪ್ಲಾಟ್, ಕುಬಸದ ಓಣಿ, ಸೋರಗಾಂವಿ ಓಣಿ, ಕರಿದೇವರ ಗುಡಿ, ಬರಗಿ ಓಣಿಯ ಪ್ರತಿಯೊಂದು ಮನೆಯ ತಾಯಂದಿರು ಸಾಂಪ್ರದಾಯಿಕ ಸೀರೆಯನ್ನು ಉಟ್ಟು, ಬರಿಗಾಲಲ್ಲಿ ರೊಟ್ಟಿಯ ಬುತ್ತಿಯನ್ನು ತಲೆಮೇಲೆ ಹೊತ್ತು ಬಹಳ ಭಕ್ತಿ ಮತ್ತು ಶೃದ್ಧೆಯಿಂದ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಮಹಾಲಿಂಗೇಶ್ವರ ಜಾತ್ರೆಯ ಪ್ರಥಮ ರೊಟ್ಟಿ ಬುತ್ತಿಯ ಮೆರವಣಿಗೆಗೆ ಕಳೆ ಕಟ್ಟಿದರು.
ಎತ್ತಿನ ಬಂಡಿಯಲ್ಲಿ ರೊಟ್ಟಿ ಬುತ್ತಿಯ ಪೂಜೆ:
ಹೆಸ್ಕಾಂ ಗಣಪತಿ ದೇವಸ್ಥಾನದ ಮುಂದೆ ಮಹಾಲಿಂಗೇಶ್ವರ ಭಾವಚಿತ್ರದೊಂದಿಗೆ ಎತ್ತಿನ ಬಂಡಿಯಲ್ಲಿ ರೊಟ್ಟಿ ಬುತ್ತಿಯ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು.

ಮಹಾಲಿಂಗಪುರದ ಕರಡಿಮಜಲು, ಗೊಲಭಾಂವಿಯ ಕೈಪೆಟ್ಟು ಮೇಳ ಹಾಗೂ ಗೊಂಬೆ ಕುಣಿತದ ಕಲಾವಿದರು ರೊಟ್ಟಿ ಬುತ್ತಿಯ ಮೆರವಣಿಗೆಗೆ ಮೆರಗು ನೀಡಿದರು. ಎರಡು ಸಾಲಿನಂತೆ ಸುಮಾರು ಒಂದು ಕೀಮಿಗೂ ಅಧಿಕ ಸರತಿ ಸಾಲಿನಲ್ಲಿ ಓಂ ನಮ: ಶಿವಾಯ ಮಂತ್ರಘೋಷಣೆಯೊAದಿಗೆ ಭಕ್ತಿಯಿಂದ ಹೆಜ್ಜೆ ಹಾಕುತ್ತಿದ್ದ ತಾಯಂದಿರನ್ನು ನೋಡುತ್ತಿದ್ದರೇ ಸಾಕ್ಷಾತ ಅಣ್ಣಪೂಣೇಶ್ವರಿಯೇ ಬರುತ್ತಿದ್ದಾಳೆ ಎಂಬ ಭಕ್ತಿಮೂಡಿಸಿದರು.


ರೊಟ್ಟಿಯ ರಾಶಿ :
ಭಕ್ತಿಯಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರೊಟ್ಟಿಬುತ್ತಿಯನ್ನು ತಂದ ನಂತರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಮಂಗಳಾರತಿ ಮಾಡಿ, ರೊಟ್ಟಿಯ ರಾಶಿಯನ್ನು ದೇವಸ್ಥಾನದ ಅನುಭವ ಮಂಟಪದಲ್ಲಿ ಸಂಗ್ರಹಿಸಲಾಯಿತು. ಸೆ.೨೫ರಿಂದ ೧೦ ದಿನಗಳ ಕಾಲ ನಡೆಯುವ ಜಾತ್ರೆಯ ಮಹಾ ದಾಸೋಹದಲ್ಲಿ ರೊಟ್ಟಿಯ ಪ್ರಸಾದವನ್ನು ವಿತರಿಸಲಾಗುವದು.


ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ರೊಟ್ಟಿ ಬುತ್ತಿಯ ಮೇರವಣಿಗೆಯ ಉಸ್ತುವಾರಿಗಳಾದ ಕೃಷ್ಣಗೌಡ ಪಾಟೀಲ, ವಿಠ್ಠಲ ಹಲಗಣಿ, ಶಂಕರಗೌಡ ಪಾಟೀಲ, ಮಹಾಲಿಂಗ ಮಾಳಿ, ಜಾತ್ರಾ ಕಮೀಟಿ ಹಿರಿಯರಾದ ಮಹಾಂತೇಶ ಹಿಟ್ಟಿನಮಠ, ಯಲ್ಲನಗೌಡ ಪಾಟೀಲ, ಗುರುಪಾದಯ್ಯ ಛಟ್ಟಿಮಠ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಮಹಾಲಿಂಗಪ್ಪ ಲಾತೂರ, ಚನ್ನಪ್ಪ ಪಟ್ಟಣಶೆಟ್ಟಿ, ವಿಜಯ ಕುಳ್ಳೋಳ್ಳಿ, ಹಣಮಂತ ಬಡಿಗೇರ, ಮಹಾಲಿಂಗಪ್ಪ ತಟ್ಟಿಮನಿ, ಮನೋಹರ ಶಿರೋಳ, ಶಂಕರಗೌಡ ಪಾಟೀಲ, ಬಸವರಾಜ ಘಂಟಿ, ಅಶೋಕ ಅಂಗಡಿ, ಹರೀಷ ನಾಯಕ, ಭೀಮಸಿ ಮೋಪಗಾರ, ಸುರೇಶ ಕಲಾಲ, ವಿಠ್ಠಲ ಕುಳಲಿ, ಸುಭಾಷ ವಜ್ಜರಮಟ್ಟಿ, ಅರ್ಜುನ ಮೋಪಗಾರ, ಮಲ್ಲು ದಲಾಲ, ಪಪ್ಪು ಹುರಕಡ್ಲಿ, ಸಿದ್ದು ಶಿರೋಳ, ಮುತ್ತಪ್ಪ ದಲಾಲ ಸೇರಿದಂತೆ ವಿವಿಧ ಸಮಾಜಗಳ ಹಿರಿಯರು, ಮಹಾಲಿಂಗೇಶ್ವರ ದೇವಸ್ಥಾನದ ಸೇವಕರು ಭಾಗವಹಿಸಿದ್ದರು.