ಸುದ್ದಿ ಕನ್ನಡ ವಾರ್ತೆ
ಜೊಯಿಡಾ : ತಾಲೂಕಿನ ನಂದಿಗದ್ದಾ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ. ಯರಮುಖ ಇದರ 68 ನೇ ವಾರ್ಷಿಕ ಮಹಾಸಭೆ ಮಂಗಳವಾರ ಯರಮುಖದ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ, ವಿ, ದಾನಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು .ಸಂಘದ ವ್ಯವಹಾರದ ಕುರಿತು ವಿಷಯ ಕ್ರಮದಂತೆ ಚರ್ಚೆ ಗಳು ನಡೆದು ಅನೇಕ ಸದಸ್ಯರು ಮಾತನಾಡಿದರು ನಂತರ ಮಾತನಾಡಿದ ಸಂಘದ ಅಧ್ಯಕ್ಷ ಆರ್ ವಿ ದಾನಗೇರಿ ಸಂಘಗಳ ಚಿಂತನೆ ಎಲ್ಲರೂ ಮಾಡಬೇಕು ಅಂದಾಗ ಮಾತ್ರ ಸಂಫದ ಅಭಿವೃದ್ಧಿ ಸಾಧ್ಯ ಸೂಪರ್ ಮಾರ್ಕೆಟ್ ವ್ಯವಹಾರ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಸೂಪರ್ ಮಾರ್ಕೆಟ್ ಲಾಭ ಖರೀದಿದಾರರಿಗೆ ನೀಡಲು ತೀರ್ಮಾನ ಮಾಡುತ್ತೇವೆ. ಹಣಕಾಸಿನ ವ್ಯವಹಾರಕ್ಕೆ ಯಾವುದೇ ತೊಂದರೆ ಇಲ್ಲ. ಅಡಿಕೆ ವಿಕ್ರಿಯಿಂದ ಸಂಘಕ್ಕೆ ಲಾಭ ಸಾಕಷ್ಟು ಬಂದಿದೆ. ಮುಂದೆ ಕೂಡ ರೈತರು ಅಡಿಕೆ ವಿಕ್ರಿಯನ್ನು ನೂರಕ್ಕೆ ನೂರರಷ್ಟು ಸಂಘದ ಮುಕಾಂತರ ಮಾಡಿರಿ.ಸಂಘದ ಲೆಕ್ಕ ಪರಿಶೋಧಕರನ್ನು ಬದಲಾಯಿಸುತ್ತೇವೆ, ಹೊಸ ಅರ್ಜಿಗಳು ಬಂದಿವೆ, ರೈತರ ಕಲ್ಯಾಣ ನಮ್ಮ ಗುರಿ, ನಿಮ್ಮ ಬೆಂಬಲ ಸದಾ ಇರಲಿ ಎಂದರು.ಕಸ್ತೂರಿ ರಂಗನ್ ವರದಿ ನಾವು ವಿರೋಧಿಸಿದ್ದೇವೆ,ಎಲ್ಲಾ ಸದಸ್ಯರು ಸಂಘದೊಂದಿಗೆ ವ್ಯವಹರಿಸಿ ಸಂಘ ಬೆಳೆಸಿರಿಎಂದರು.
ಸಂಘದ ಉಪಾಧ್ಯಕ್ಷ ಸುದರ್ಶನ್ ಭಾಗವತ , ಆಡಳಿತ ಮಂಡಳಿ ಸದಸ್ಯರಾದ ಶ್ರೀನಾಥ್ ದೇಸಾಯಿ , ಸಂದೇಶ ದೇಸಾಯಿ, ಶಶಿಕಾಂತ್ ಹೆಗಡೆ, ವಿನಾಯಕ ಪಟಗಾರ , ರವಿ ವೆಳಿಪ್, ಶ್ರೀಮತಿ ರೇಖಾ ಉಪಾಧ್ಯ , ಶ್ರೀಮತಿ ಅರ್ಚನಾ ಹೆಗಡೆ , ಪರಮೇಶ್ವರ್ ಸಿದ್ಧಿ, ಸುಬ್ರಮಣ್ಯ ಭಾಗ್ವತ್, ಸುಬ್ರಾಯ ದಾನಗೇರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವರಾಮ ದಬಗಾರ ಸಿಬ್ಬಂದಿಗಳಾದ ಸಂಧ್ಯಾ ಭಟ್ , ಸಂಪತ್ ಹೆಗಡೆ , ಜೋನ್ ಪೆರೇರಾ, ದಯಾನಂದ ಕುಟ್ಟಿಕರ್, ಸುರೇಶ ಅವಳಕರ, ಕಲ್ಪನಾ ದೇಸಾಯಿ , ಕೃಷ್ಣ ಗಾಂವ್ಕರ್, ಶ್ರೀಲತಾ ಭಾಗ್ವತ್ ಸಭೆ ನಡೆಯಲು ಸಹಕರಿಸಿದರು.ಇದೇ ಸಂದರ್ಭದಲ್ಲಿ ಉತ್ತಮ ಕೃಷಿಕರು, ಉತ್ತಮ ವ್ಯವಹಾರಸ್ತರು, ಮತ್ತು ಸಂಘದ ಸಂಸ್ಥಾಪಕ ಅಧ್ಯಕ್ಷ ರಲ್ಲೊಬ್ಬರಾದ ದಿವಂಗತ ಅನಂತ ನಾರಾಯಣ ಭಟ್ ರವರ ಧರ್ಮ ಪತ್ನಿ ಶ್ರೀಮತಿ ಭಾಗೀರಥಿ ಅನಂತ ಭಟ್ ರವರನ್ನು ಮನೆಗೆ ಹೋಗಿ ಸನ್ಮಾನಿಸಲಾಯಿತು. ಸದಸ್ಯರು ಗಳ ಮಕ್ಕಳ ಸಾಧನೆ ಗಮನಿಸಿ ಪ್ರೋತ್ಸಾಹಿಸ ಲಾಯಿತು. ಸಭೆಗೆ ಬಂದ ಸದಸ್ಯರು ಗಳಿಗೆ ಊಟ ತಿಂಡಿ ವ್ಯವಸ್ಥೆ ಗಳನ್ನು ತುಂಬಾ ಚನ್ನಾಗಿ ಮಾಡಲಾಗಿತ್ತು.
